ರೈಟರ್-ಡ್ರೈವರ್ ಜಗಳ, ಕೊಲೆಯಲ್ಲಿ ಅಂತ್ಯ

392

ಮೂಡಿಗೆರೆ : ಕಾಫಿತೋಟದಲ್ಲಿ ಕೆಲಸ ಮಾಡುವ ರೈಟರ್ ಹಾಗೂ ಡ್ರೈವರ್ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಜಯಪ್ರಕಾಶ್ ಎಂಬುವರ ತೋಟದಲ್ಲಿ ರೈಟರ್ ಆಗಿ ಕೆಲಸ ಮಾಡ್ತಿದ್ದ ಸುರೇಶ್ ಹಾಗೂ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಸತೀಶ್, ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಹಣದ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಜಗಳದ ವೇಳೆ ಡ್ರೈವರ್ ಸತೀಶ್ ರೈಟರ್ ಸುರೇಶ್‍ಗೆ ಜೋರಾಗಿ ತಳ್ಳಿದ್ದಾನೆ. ಬೀಳುವ ವೇಳೆ ಕತ್ತಲಲ್ಲಿ ಕಲ್ಲಿನ ಮೇಲೆ ಬಿದ್ದ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸತೀಶ್‍ನನ್ನ ಪೊಲೀಸರು ಬಂಧಿಸಿದ್ದಾರೆ.