ಸಿದ್ದರಾಮಯ್ಯ ನಡಿಗೆ ಮೈಸೂರಿನ ಮನೆಯ ಕಡೆಗೆ : ಕೇಂದ್ರ ಸಚಿವ ಸದಾನಂದಗೌಡ

406

ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಿದ್ದರಾಮಯ್ಯ ಸಾಕು ,ಯಡಿಯೂರಪ್ಪ ಬೇಕು ಅನ್ನೋ ಘೋಷಣೆ ಕೂಗಿದ್ದಾರೆ. ಮಳವಳ್ಳಿಯಲ್ಲಿ ವೇದಿಕೆಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ನಡೆಗೆ ಮೈಸೂರಿನ ಮನೆಯ ಕಡೆಗೆ ಅಂತಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಜೆಡಿಎಸ್ ನ ಎಲ್ಲ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದು, ಕಾಂಗ್ರೆಸ್ ಪಕ್ಷವೂ ಶಿಥಿಲಗೊಳ್ಳಲಿದೆ ಎಂದು ಸದಾನಂದಗೌಡ ಹೇಳಿದ್ರು.