ಬೆಂಗಳೂರು- ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಲೈಂಗಿಕ ಕಾರ್ಯಕರ್ತರಾಗಿರುತ್ತಾರೆ. ಈ ಕಸುಬಿಗೆ ಬರುವ ಮಹಿಳೆಯರು ಎಲ್ಲರಿಗಿಂತ ಹೆಚ್ಚು ಅಪಾಯಕಾರಿ ಕೆಲಸಕ್ಕೆ ಕೈ ಹಾಕುತ್ತಾರೆ ಮತ್ತು ಇವರು ದೌರ್ಜನ್ಯಕ್ಕೆ ಒಳಗಾಗಿತ್ತಾರೆ. ಇದರಿಂದ ಅವರಿಗೂ ಸಮಾಜದಲ್ಲಿ ಗೌರವದಿಂದ ಬದುಕಲು ‘ದಮನಿತ ಮಹಿಳೆಯರು’ ಎಂದು ಹೊಸ ಹೆಸರು ನೀಡಲಾಗಿದೆ. ಹಾಗೂ ತಮ್ಮ ಕುಟುಂಬ ನಿರ್ವಹಣೆಗಾಗಿ ಬೇರೆ ದಾರಿ ಇಲ್ಲದೆ ಇತರರಿಗೆ ಲೈಂಗಿಕ ಸುಖ ನೀಡುವ ಮಹಿಳೆಯರನ್ನು ಕೂಡ ದಮನಿತ ಮಹಿಳೆಯರು ಎಂದು ಸಂಭೋದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಆದೇಶಿಸಿದ್ದಾರೆ.