ಬೇರೊಬ್ಬನ ಸ್ನೇಹಿತನ ಜೊತೆ ಮಲಗಿದ್ದ ಫೋಟೋವನ್ನು ಅಕಸ್ಮತಾಗಿ ಪ್ರಿಯಕರಿಗೆ ಕಳಿಸಿದ್ಲು, ಮುಂದೇನಾಯ್ತು ?

858

ಇಂಗ್ಲೆಂಡ್: 17 ವರ್ಷದ ಯುವತಿಯೊಬ್ಬಳು ಆಕಸ್ಮಿಕವಾಗಿ ಆಕೆಯ ಪ್ರಿಯಕರನಿಗೆ ಫೋಟೋವೊಂದನ್ನು ಕಳುಹಿಸಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ. ಷಾರ್ಲೆಟ್ ತನ್ನ ಮನೆಯ ಹೊರಗೆ ಇದ್ದ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಎರಡು ವರ್ಷಗಳಿಂದ ಈಕೆ 20 ವರ್ಷದ ಜ್ಯಾಕ್ ಹಸ್ಟ್ರ ನನ್ನು ಪ್ರೀತಿಸುತ್ತಿದ್ದಳು. ನಂತರ ಅವರಿಬ್ಬರ ಸಂಬಂಧ ಕಡಿತಗೊಂಡಿತ್ತು. ಇತ್ತೀಚೆಗೆ ಆಕೆ ಬೇರೊಬ್ಬ ಸ್ನೇಹಿತನ ಜೊತೆ ಮಲಗಿದ್ದ ಫೋಟೋವನ್ನು ಅಕಸ್ಮತಾಗಿ ಜ್ಯಾಕ್ ಗೆ ಕಳುಹಿಸಿದ್ದಾಳೆ.

ಬಳಿಕ ತನ್ನ ತಪ್ಪನ್ನು ಅರಿತುಕೊಂಡು ಕ್ಷಮೆಯನ್ನು ಕೇಳಿದ್ದಾಳೆ. ನಂತರ ಜ್ಯಾಕ್‍ಗೆ `ಗುಡ್ ಬೈ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಮೆಸೇಜ್ ಕಳುಹಿಸಿದಳು. ನಂತರ ಮತ್ತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ನನ್ನನ್ನು ದ್ವೇಷಿಸುತ್ತಿದ್ದಿಯಾ ಎಂದು ನನಗೆ ತಿಳಿದಿದೆ” ಎಂದು ಮರು ಮೆಸೇಜ್ ಕಳುಹಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಷಾರ್ಲೆಟ್‍ಗೆ ನನ್ನ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಅವಳು ನನ್ನಿಂದ ದೂರವಾಗಲು ಬಯಸಿದ್ದಳು. ಕೆಲ ದಿನಗಳ ಹಿಂದೆಯಷ್ಟೇ ನನಗೆ ಕರೆ ಮಾಡುತ್ತಿದ್ದಳು ಮತ್ತು ಕೋಪದಿಂದ ನಾನು ಮಾಡಿದ ಮೆಸೇಜ್‍ಗೆ ಉತ್ತರಿಸುತ್ತಿದ್ದಳು. ಯಾರೋ ನನ್ನ ಬಗ್ಗೆ ಅವಳಿಗೆ ಕೆಟ್ಟದಾಗಿ ಹೇಳಿರಬಹುದು. ಆಕೆಗೆ ನನ್ನ ಜಗತ್ತು ಸರಿಹೊಂದುವುದಿಲ್ಲ ಮತ್ತು ಅವಳು ಎಂದಿಗೂ ನನ್ನ ಬಳಿ ಬರುವುದಿಲ್ಲ ಎಂದು ಭಾವಿಸಿದ್ದೆ ಎಂದು ಆಕೆಯೆ ಗೆಳೆಯ ಜ್ಯಾಕ್ ಹೇಳಿದ್ದಾರೆ.

ಘಟನೆಗೂ ಸ್ವಲ್ಪ ದಿನದ ಮೊದಲು ಆಕೆ ಕಾಲೇಜಿಗೆ ಹೋಗಲಾರಂಭಿಸಿದ್ದಾಳೆ. ಅಲ್ಲಿ ಹೊಸ ಸ್ನೇಹಿತರನ್ನು ಭೇಟಿ ಮಾಡಿ ಮಾಡಿಕೊಂಡು ಸಂತೋಷದಿಂದ ಇದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತರೊಂದಿಗೆ ಹೊರ ಹೋಗಿದ್ದಳು. ಆದರೆ ಈ ವಿಚಾರವನ್ನು ಮರುದಿನ ನನ್ನ ಬಳಿ ಪ್ರಸ್ತಾಪಿಸಿದ್ದು, ಆ ರಾತ್ರಿ ನಾನು ಬೇರೊಬ್ಬನಿಗೆ ಕಿಸ್ ಮಾಡಿದ್ದೆ ಎಂದು ಹೇಳಿದ್ದಳು ಎಂದು ಜ್ಯಾಕ್ ವಿವರಿಸಿದ್ದಾರೆ. ಷಾರ್ಲೆಟ್ ಜ್ಯಾಕ್ ಜೊತೆ ಈ ವಿಚಾರದ ಬಗ್ಗೆ ಮಾತನಾಡಲು ಬಯಸಿದ್ದಳು. ಆದರೆ ಜ್ಯಾಕ್ ಬ್ಯುಸಿಯಾಗಿದ್ದ. ಮತ್ತೆ ಅವಳು ಬೇರೊಬ್ಬನ ಜೊತೆ ಮಲಗಿದ್ದ ಫೋಟೋ ಕಳುಹಿಸಿದ್ದಾಳೆ. ಆದರೂ ಜ್ಯಾಕ್ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಕೊನೆಗೆ ಸರಿ ನಾನು ಉತ್ತರ ಪಡೆದಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ.

ತಕ್ಷಣ ಜ್ಯಾಕ್ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದನು. ಆದರೆ ಅವಳು ಯಾವುದೇ ಪ್ರತಿಕ್ರಿಯೆ ಮಾಡಲಿಲ್ಲ. ನಂತರ ಜ್ಯಾಕ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಜೊತೆ ಅವಳ ಮನೆಗೆ ಹೋಗಿದ್ದಾನೆ. ಆದರೆ ಅಷ್ಟರಲ್ಲಿ ಅವಳು ಆತ್ಮಹತ್ಯೆಗೆ ಶರಣಾಗಿದ್ದಳು ಎಂಬುದಾಗಿ ವರದಿಯಾಗಿದೆ. ಷಾರ್ಲೆಟ್ ಮರಣೋತ್ತರ ಪರೀಕ್ಷೆಯ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.