ಭಾರಿ ಮಳೆ ಹಿನ್ನಲೆ ಮುಳುಗಡೆಯ ಭೀತಿಯಲ್ಲಿ ಪ್ರಸಿದ್ದ ಶಿಶಿಲೇಶ್ವರ ದೇವಸ್ಥಾನ…

414
firstsuddi

ಬೆಳ್ತಂಗಡಿ -ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆ,ಕರಾವಳಿಯ ನದಿ ಮತ್ತು ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಂಗಳೂರು- ಬೆಂಗಳೂರು ರಾಷ್ತ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು,ಶಿಶಿಲೇಶ್ವರ ದೇವಸ್ಥಾನ ಮುಳುಗಡೆಯ ಭೀತಿಯಲ್ಲಿದ್ದು, ಶಿಶಿಲ ತೂಗು ಸೇತುವೆ ಜಲಾವೃತವಾಗಿದ್ದು. ಕಪಿಲ ನದಿಯು ಉಕ್ಕಿ ಹರಿಯುತ್ತಿದ್ದು, ಧರ್ಮಸ್ಥಳ- ಕೊಕ್ಕಡ ನಡುವೆ ಸಂಪರ್ಕ ಕಲ್ಪಿಸುವ ಪಟ್ರಮೆ ಎಂಬಲ್ಲಿನ ಸೇತುವೆ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.