ಹೋದಲ್ಲೆಲ್ಲಾ ರಕ್ತದಲ್ಲಿ ಬರೆದುಕೊಡ್ತೀನಿ ಅಂತಾರೆ, ಬಿಎಸ್‍ವೈಗೆ ಎಷ್ಟು ರಕ್ತವಿದೆ, ಸಿಎಂ ಸಿದ್ದರಾಮಯ್ಯ ವ್ಯಂಗ್ಯ

410

ಮೂಡಿಗೆರೆ : ಬಿ.ಎಸ್.ಯಡಿಯೂರಪ್ಪ ಹೋದಲೆಲ್ಲಾ ರಕ್ತದಲ್ಲಿ ಬರೆದುಕೊಡ್ತೇನೆ, ರಕ್ತದಲ್ಲಿ ಬರೆದುಕೊಡ್ತೇನೆ ಎಂದು ಹೇಳ್ತಿದ್ದಾರೆ, ಅವರಿಗೆ ಎಷ್ಟು ರಕ್ತವಿದೆ ಅನ್ನೋದನ್ನ ಪರೀಕ್ಷೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಪರಿವರ್ತನಾ ರ್ಯಾಲಿಗೆ ಹೋದಲೆಲ್ಲಾ ರಕ್ತದಲ್ಲಿ ದಕ್ಷ, ಪ್ರಾಮಾಣಿಕ ಆಡಳಿತ ನೀಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈಗ ಸುಳ್ಳು ಹೇಳಿದ್ರೆ ಏನೂ ಪ್ರಯೋಜನವಿಲ್ಲ. ಜನ ಅಧಿಕಾರ ನೀಡಿದಾಗ ಏನು ಮಾಡಿದ್ರು ಅನ್ನೋದ್ನ ನೋಡ್ತಾರೆ. ಹಾಗೇ ನೋಡಿದ್ರೆ, ಅವರು ಜೈಲಿಗೆ ಹೋಗಿದ್ರು ಅನ್ನೋದೆ ದೊಡ್ಡದ್ದು ಎಂದು ವ್ಯಂಗ್ಯವಾಡಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ ಏಳೆಂಟು ಜನ ಜೈಲಿಗೆ ಹೋಗಿದ್ದು, ಸದನದಲ್ಲಿ ಬ್ಲೂಫಿಲಂ ನೋಡಿದ್ರು ಅನ್ನೋದಷ್ಟೆ ಜನರಿಗೆ ನೆನಪಾಗೋದು ಎಂದು ಬಿಜೆಪಿ ಹಾಗೂ ಬಿಎಸ್‍ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ.