ಬಟ್ಟೆ ವಿಚಾರಕ್ಕೆ ಮನಸ್ತಾಪ: ಅಕ್ಕ-ತಂಗಿ ಆತ್ಮಹತ್ಯೆ…

603
firstsuddi

ಮೈಸೂರು: ಬಟ್ಟೆಯ ವಿಚಾರಕ್ಕಾಗಿ ಜಗಳವಾಡಿ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಾಳಬಸವಹುಂಡಿ ಗ್ರಾಮದಲ್ಲಿ ನಡೆದಿದೆ. ಕಾಳಬಸವಹುಂಡಿ ಗ್ರಾಮದ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾದ ಅನು (16), ಕವಿತಾ (30) ಮೃತರು. ಚೂಡಿದಾರಕ್ಕಾಗಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ಅನು ಹಾಗೂ ಮೂಗಿಯಾಗಿದ್ದ ಅಕ್ಕ ಕವಿತಾ ಜಗಳವಾಡಿದ್ದರು.ಇದರಿಂದ ಬೇಸತ್ತು ಅನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅನು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಮೃತದೇಹದ ಮುಂದೆ ರೋಧಿಸುತ್ತಿದ್ದರು.ಈ ವೇಳೆ ಕವಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.