ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಹುಭಾಷಾ ನಟಿ ಸೋನಾಲಿ ಬೇಂದ್ರೆ…

427
firstsuddi

ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜೊತೆ ಪ್ರೀತ್ಸೆ ಚಿತ್ರದಲ್ಲಿ ನಟಿಸಿದ ಬಹುಭಾಷಾ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ನ್ಯೂಯಾರ್ಕ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮಗೆ ಕ್ಯಾನ್ಸರ್ ಇರೋ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ನನಗೆ ಕ್ಯಾನ್ಸರ್ ಇದೆ ಎಂದು ಇತ್ತೀಚೆಗೆ ತಿಳಿಯಿತು ಈ ವಿಷಯ ತಿಳಿದ ನನ್ನ ಕುಟುಂಬದವರು ಹಾಗೂ ಮಿತ್ರರು ನನ್ನ ಜೊತೆಯಲ್ಲೇ ಇದ್ದಾರೆ ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.