ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ- ದಿನೇಶ್ ಗುಂಡೂರಾವ್.

441
FIRSTSUDDI

ಚಿಕ್ಕಮಗಳೂರು-ರಾಜ್ಯ ಕೆಪಿಸಿಸಿಯ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಶಾಸಕ ದಿನೇಶ್ ಗುಂಡೂರಾವ್ ಅವರು ತಮ್ಮ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

 

FIRSTSUDDI

ಅವರ ಪತ್ನಿ ಟಬು ರಾವ್ ಅವರ ಹುಟ್ಟು ಹಬ್ಬದ ದಿನವೇ ಅಧ್ಯಕ್ಷರಾಗಿ ಆಯ್ಕೆ ಆಗಿರೋದು ವಿಶೇಷವಾಗಿದ್ದು ಅವರ ಧರ್ಮಪತ್ನಿ ಟಬು ರಾವ್ ಹೆಸರಿನಲ್ಲಿಯೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಸುವ ವೇಳೆ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರ ಇಬ್ಬರು ಮಕ್ಕಳಾದ ಅನನ್ಯ ರಾವ್ ಮತ್ತು ಅಮಿರಾ ರಾವ್ ಮತ್ತು ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ‌ಉಪಸ್ಥಿತರಿದ್ದರು. ವಿಶೇಷ ಪೂಜೆಯ ನಂತರ ಭಾರತಿ ತೀರ್ಥ ಸ್ವಾಮೀಜಿಯ ದರ್ಶನ ಪಡೆದು ಕುಟುಂಬದ ಎಲ್ಲಾ ಸದಸ್ಯರು ಆಶೀರ್ವಾದ ಪಡೆದರು.