ಫಸ್ಟ್ ಸುದ್ದಿ- ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ಜಗಳವಾಡಿದ ವಿದ್ಯಾರ್ಥಿನಿ ಶಿವಾನಿ(21) ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಬಳಿಕ ಗೆಳೆಯನೇ ಶಿವಾನಿ ತಂದೆಗೆ ಫೋನ್ ಮಾಡಿ ತಿಳಿಸಿದ್ದಾನೆ. ಅವರು ಶಿವಾನಿ ಕೋಣೆಗೆ ಹೋಗಿ ನೋಡಿದಾಗ ಆಕೆ ಮೃತಪಟ್ಟಿದ್ದು, ಸೆಂಟ್ ಸ್ಟೀಫನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲೇ ಅವಳು ಮೃತಪಟ್ಟಿದ್ದು, ಕುಟುಂಬದ ಜೊತೆ ಘೋಂಡಾಗಾವ್ ನಲ್ಲಿ ವಾಸವಾಗಿದ್ದು, ಶಿವಾನಿ ಸಿ.ಎ ವ್ಯಾಸಂಗ ಮಾಡುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.