ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್ : ದಯಾಮರಣಕ್ಕೆ ಅಸ್ತು

480

ನವದೆಹಲಿ : ಸುಪ್ರೀಂಕೋರ್ಟ್ ಇಂದು ಐತಿಹಾಸಿಕ ತೀರ್ಪೋಂದನ್ನು ನೀಡಿದೆ. ದಯಾಮರಣ ಪರ ವಿರೋಧ ಚರ್ಚೆಗೆ ಈ ತೀರ್ಪು ಅಂತ್ಯ ಹಾಡಿದೆ. ರೋಗಿಯು ಗೌರವಾನ್ವಿತವಾಗಿ ಸಾಯಲು ಅಂದರೆ ದಯಾ ಮರಣಕ್ಕೆ ಅಸ್ತು ಎಂದಿದೆ. ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠ ಈ ಪ್ರಮುಖ ಆದೇಶ ನೀಡಿದೆ. ರೋಗಿಯು ಸಾವು ಬದುಕಿನ ನಡುವೆ  ಹೋರಾಡುತ್ತಿದ್ದರೆ, ಇನ್ನು ಬದುಕಲು ಸಾಧ್ಯವೇ ಇಲ್ಲ ಎಂದು ಮೆಡಿಕಲ್ ಬೋರ್ಡ್ ಸ್ಪಷ್ಟಪಡಿಸಿದರೆ ರೋಗಿಯು ದಯಾ ಮರಣ ತೆಗೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ದಯಾಮರಣ ಪರ-ವಿರೋಧವಾಗಿ ಭಾರೀ ಚರ್ಚೆಯಾಗಿತ್ತು. ದಯಾಮರಣ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಾಕಷ್ಟು ಐಪಿಲ್ ಬಂದಿತ್ತು. ಇಂದು ವಿಚಾರಣೆ ವೇಳೆ ಕೂಡಾ ನ್ಯಾಯಾಲಯ ಗೊಂದಲದಲ್ಲಿತ್ತು. ಕೊನೆಗೆ ಪಂಚ ಸದಸ್ಯ ಪೀಠ ಒಂದು ನಿರ್ಧಾರಕ್ಕೆ ಬಂದು ಗೌರವಾನ್ವಿತಾವಗಿ ಸಾಯುವುದು ಪ್ರತಿಯೊಬ್ಬರ ಹಕ್ಕು. ತೀರಾ ಬದುಕಲು ಆಗದೇ ಇದ್ದರೆ ದಯಾಮರಣ ತೆಗೆದುಕೊಳ್ಳಬಹುದು ಎಂದಿದೆ.