ತಮಿಳು ಕಿರಿತೆರೆ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು.

614
firstsuddi

ಚೆನ್ನೈ- ತಮಿಳು ಕಿರುತೆರೆ ನಟಿ ಪ್ರಿಯಾಂಕ ಅವರು ಆತ್ಮಹತ್ಯೆಗೆ ಶರಣಾಗಿದ್ದು, ತಮಿಳು ಧಾರವಾಹಿಗಳಲ್ಲಿ ನಟಿಸಿದ್ದು, ಹಿರಿಯ ನಟಿ ರಮ್ಯಾ ಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ತಮಿಳಿನ ‘ವಂಶಂ’ ಎಂಬ ಧಾರಾವಾಹಿಯಲ್ಲಿ ಪ್ರಿಯಾಂಕ ಅವರು  ಜ್ಯೋತಿಕಾ ಎಂಬ ಪಾತ್ರದಲ್ಲಿ ನಟಿಸುವುದರ ಮೂಲಕ ಜನಪ್ರಿಯತೆ ಗಳಿಸಿದ್ದರು. ಇಂದು ಮುಂಜಾನೆ ಮನೆಕೆಲಸದಾಕೆ ಬಂದು ಕರೆದಾಗ ಮನೆ ಬಾಗಿಲನ್ನು ಯಾರು ತೆರೆಯದ ಕಾರಣ ಕಿಟಕಿಯಿಂದ ನೋಡಿದಾಗ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕೆಲಸದಾಕೆ ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.