ಪ್ರಸಾದ ಸೇವಿಸುವ ವೇಳೆ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಶಿಕ್ಷಕಿ ಸಾವು

366

ಚಿಕ್ಕಮಗಳೂರು : ತೆಂಗಿನ ಕಾಯಿ ಸೇವಿಸುವ ವೇಳೆಯಲ್ಲಿ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಉಸಿರುಗಟ್ಟಿ ಶಿಕ್ಷಕಿ ಸಾವನಪ್ಪಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ನಿವಾಸಿ 28 ವರ್ಷದ ನವ್ಯಶ್ರೀ ಮೃತ ಮಹಿಳೆ. ನಗರದ ಸಂಜೀವಿನಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನವ್ಯಶ್ರೀ ಇಂದು ಬೆಳ್ಳಿಗೆ ಶಾಲೆಯ ಪಕ್ಕದಲ್ಲಿದ್ದ ಸಾಲುಮರದಮ್ಮ ದೇವಾಲಯಕ್ಕೆ ತೆರಳಿ ಪೂಜೆ ಮುಗಿಸಿದ ನಂತರ ಶಾಲೆಗೆ ಆಗಮಿಸಿ ಶಿಕ್ಷಕರ ಕೊಠಡಿಯಲ್ಲಿ ತೆಂಗಿನ ಕಾಯಿ ಪ್ರಸಾದ ಸೇವಿಸುವ ವೇಳೆಯಲ್ಲಿ ತೆಂಗಿನ ಕಾಯಿ ಚೂರು ಗಂಟಲಿನಲ್ಲಿ ಸಿಕ್ಕಿಕೊಂಡಿದೆ, ಈ ವೇಳೆ ನವ್ಯಶ್ರೀ ತೀವ್ರ ಉಸಿರುಗಟ್ಟಿ ಸ್ಥಳದಲ್ಲಿ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅವರನ್ನ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ನವ್ಯಶ್ರೀ ಸಾವನಪ್ಪಿದ್ದಾರೆ.  ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.