ತನ್ನ ಚಿತೆಗೆ ತಾನೇ ಬೆಂಕಿ ಇಟ್ಟುಕೊಂಡ 90ರ ಅಜ್ಜಿ, ಯಾಕೆ ? ಹೇಗೆ ಗೊತ್ತಾ ?

1170

ಮುಂಬಯಿ: ಒಂಟಿಯಾಗಿ ಜೀವಿಸುತ್ತಿದ್ದ 90 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯೊಳಗೆ ತಾವೇ, ಚಿತೆ ಸಿದ್ಧಪಡಿಸಿಕೊಂಡು, ಬೆಂಕಿಗಾಹುತಿಯಾದ ಘಟನೆ ಮಹಾರಾಷ್ಟ್ರದ ಬಮಾನಿ ಎಂಬ ಹಳ್ಳಿಯೊಂದರಲ್ಲಿ ನಡೆದಿದೆ. ಕಲ್ಲವ್ವ ದಾಡು ಕಾಂಬ್ಳೆ ಸಾವಿಗೆ ಶರಣಾದ ವೃದ್ಧೆ. ಈಕೆಯ 57 ವರ್ಷದ ಮಗ ವಿಟ್ಟಲ್ ಪಕ್ಕದ ಮನೆಯಲ್ಲಿಯೇ ಇದ್ದು, ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಊಟ-ತಿಂಡಿಗೂ ಕಲ್ಲವ್ವ ಮಗನನ್ನೇ ಆಶ್ರಯಿಸಿದ್ದರು.

ನ. 13ರ ರಾತ್ರಿಯೂ ಮಗನ ಮಗಳು ಮನೆಗೆ ಬಂದು ಊಟ ಕೊಟ್ಟು ಹೋಗಿದ್ದಳು. ಮಾರನೇ ದಿನ ಮೊಮ್ಮಗಳು ಮತ್ತೆ ಹಾಲು ಕೊಡಲು ಬಂದಾಗ ಅಜ್ಜಿ ಬಾಗಿಲು ತೆಗೆದಿಲ್ಲ. ಹೋಗಿ, ತಂದೆಯನ್ನು ಕೂಗಿದ್ದಾಳೆ. ಮಗ ಬಂದು ನೋಡಿದಾಗ, ಕಲ್ಲವ್ವ ಕಟ್ಟಿಗೆ ಹಾಗೂ ಬೆರಣಿಯಿಂದ ಚಿತೆ ಮಾಡಿಕೊಂಡು, ಬೆಂಕಿಗಾಹುತಿಯಾಗಿದ್ದು ಬೆಳಕಿಗೆ ಬಂದಿದೆ

LEAVE A REPLY

Please enter your comment!
Please enter your name here