ಚಿಕ್ಕಮಗಳೂರು: ತರೀಕೆರೆ ತಾಲೂಕಿನ ದುಗ್ಲಾಪುರದಲ್ಲಿ ಖಾರದ ಪುಡಿ ಎರಚಿ ಮಹಿಳೆಯ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಧರ್ಮರಾಜ್, ಅರುಣ್, ರಾಜ ಮಾಣಿಕ್ಯಂ, ವಿಜಯ್, ವೆಂಕಟೇಶ್ ಬಂಧಿತ ಆರೋಪಿಗಳು. ಇವರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ 18ರಂದು ತೆಂಗಿನಕಾಯಿ ವ್ಯಾಪಾರಿಗಳ ವೇಷದಲ್ಲಿ ಆಗಮಿಸಿ ದುಗ್ಲಾಪುರದ ಶಾಂತಮ್ಮ ಎಂಬವರಿಗೆ ಖಾರದ ಪುಡಿ ಎರಚಿ ಬಳಿಕ ತಲೆಗೆ ತೆಂಗಿನ ಕಾಯಿಯಿಂದ ಬಡಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ನಂತರ 15 ಸಾವಿರ ರೂಪಾಯಿ ನಗದು, ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.