ಗುವಾಹತಿ – ಕಳೆದ ಮಂಗಳವಾರ ಶಿವಸಾಗರ್ ಜಿಲ್ಲೆಯ ಸಿಮಲ್ ಗುರಿ ರೈಲು ನಿಲ್ದಾಣದ ರೈಲೊಂದರ ಶೌಚಾಲಯದಲ್ಲಿ 21 ವರ್ಷದ ಯುವತಿ ಶವ ಪತ್ತೆಯಾಗಿದ್ದು. ಈಕೆ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಮರುದಿನ ಬುಧವಾರ ಜೋಹರ್ ಜಿಲ್ಲೆಯ ಮಾರಿಯಾನಿ ನಿಲ್ದಾಣದ ಅವಧ್-ಅಸ್ಸಾಂ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತೊಬ್ಬಳು ಮಹಿಳೆಯ ಮೃತದೇಹ ಕಂಡುಬಂದಿದ್ದು. ಈ ಇಬ್ಬರ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆಯಾಗಿರುವುದು ದೃಢಪಟ್ಟ ಪರಿಣಾಮ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಚಿರಿಂಗ್ ಚಪೋರಿ ಪ್ರದೇಶದಲ್ಲಿ ಬಿಕಾಶ್ ದಾಸ್ ನನ್ನು ಬಂಧಿಸಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯರ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮತ್ತು ಕೊಲೆ ನಡೆಸಿದ್ದಾಗಿ ತಪ್ಪೋಪ್ಪಿಕೊಂಡನಲ್ಲದೇ ತನ್ನ ಸ್ನೇಹಿತ ಬಿಪಿನ್ ಪಾಂಡೆ ಕೂಡ ಇದೇ ರೀತಿಯ ಅಪರಾಧ ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಬಿಪಿನ್ ಪಾಂಡೆಯನ್ನು ಸಹ ಸೆರೆಹಿಡಿದಿದ್ದಾರೆ. ಅಸ್ಸಾಂ ಪೊಲೀಸರು ದಿಬ್ರುಗಢ್ ಜಿಲ್ಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.