ಮುಸ್ಲಿಂ ಧರ್ಮದ ಮಂಗಳೂರು ಮೂಲದ ಬ್ಯಾರಿ ಸಮುದಾಯದವರು ಮತ್ತು ಕೊಟ್ಟಿಗೆಹಾರದಲ್ಲಿ ಶುಕ್ರವಾರ ಸಂಭ್ರಮದ ರಂಜಾನ್ ಹಬ್ಬ ಆಚರಿಸಿದರು.ಬೆಳಿಗ್ಗೆಯೇ ಮುಸ್ಲಿಂನ ಬ್ಯಾರಿ ಸಮುದಾಯದವರು ಹೊಸ ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಒಂದು ತಿಂಗಳ ಕಠಿಣ ಉಪವಾಸದ ನಂತರ ಹಬ್ಬಕ್ಕೆ ಸರ್ವ ಸಿಧ್ದತೆಯಾಗಿ ನಮಾಜ್ ಸಲ್ಲಿಸಿ ಖಬರಸ್ಥಾನಕ್ಕೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮಸೀದಿಯ ಗುರುಗಳು ಪವಿತ್ರ ಗ್ರಂಥ ಕುರಾನ್‍ಸೂರೆಗಳನ್ನು ಓದಿ ದೇವರಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷವಾಗಿ ಬೇಡಿಕೊಂಡರು.
ಕೊಟ್ಟಿಗೆಹಾರದ ಹಿರಿಯ ಗ್ರಾಮಸ್ಥ ಟಿ.ಎ.ಖಾದರ್ ಮಾತನಾಡಿ ರಂಜಾನ್ ಮುಸ್ಲೀಂ ಧರ್ಮವು ತ್ಯಾಗ,ಪ್ರೀತಿ,ಶಾಂತಿ ಮನೋಭಾವನೆಯ ಹಬ್ಬವಾಗಿದ್ದರೂ ಬಡವ ಬಲ್ಲಿದರ ಮೇಲೆ ಅನುಕಂಪ ತೋರಿಸುವ ಹಬ್ಬವಾಗಿದ್ದು ರಂಜಾನ್ ಆಚರಿಸುವಾಗ ಯಾರನ್ನೂ ಮೇಲು ಕೀಳು ಎನ್ನದೇ ಸರ್ವರೂ ಸಮಾನರು ಎಂಬ ಐಕ್ಯತೆಯಿಂದ ಹಸಿದವರಿಗೆ ಅನ್ನ ನೀರು ಕೊಡುವ ಉದಾರತೆ ಸರ್ವರಲ್ಲೂ ಬೆಳೆಸುವಂತೆ ಪ್ರೇರೇಪಿಸುವುದೇ ರಂಜಾನ್ ಹಬ್ಬದ ವಿಶೇಷತೆಯಾಗಿದೆ.ರಂಜಾನ್ ಹಬ್ಬವು ಪ್ರೀತಿ ಶಾಂತಿ ಐಕ್ಯತೆ ಸರ್ವ ಧರ್ಮದ ಕುಟುಂಬದಲ್ಲೂ ನೆಲೆಯೂರಲಿ ಎಂದು ಹಾರೈಸಿದರು.ಮುಸ್ಲಿಂ ಧರ್ಮದ ಬ್ಯಾರಿ ಸಮುದಾಯದ ಮಕ್ಕಳು ಮತ್ತು ಹಿರಿಯರು ಪರಸ್ಪರ ಈದ್ ಮುಭಾರಕ್ ಶುಭಾಶಯ ಕೋರಿ ಪರಸ್ಪರ ಕೈಕೊಟ್ಟು ಆಲಿಂಗನ ಮಾಡುವ ಮೂಲಕ ತಮ್ಮಲ್ಲಿಯ ಆತ್ಮೀಯತೆಯನ್ನು ದೃಢಪಡಿಸಿದರು.ಶನಿವಾರದಂದು ಮುಸ್ಲಿಂ ಧರ್ಮದ ಇನ್ನೊಂದು ಪಂಗಡದವರು ರಂಜಾನ್ ಹಬ್ಬ ಆಚರಿಸಲಿದ್ದಾರೆ.ಹಬ್ಬದ ಸಂಭ್ರಮದಲ್ಲಿ ಕೊಟ್ಟಿಗೆಹಾರ ಜುಮ್ಮಾ ಮಸೀದಿಯ ಸಮಿತಿ ಅಧ್ಯಕ್ಷ ಅಬೂಬೇಕರ್ ಸಿದ್ದೀಕ್,ಹಾಜಿ ಮಹಮ್ಮದ್,ಮೋಯಿದ್ದೀನ್,ಯೂಸುಪ್,ಮುನೀರ್,ತನು ಕೊಟ್ಟಿಗೆಹಾರ,ಅಬ್ದುಲ್ ಖಾದರ್,ಬಾವಕ,ಬದ್ರುದ್ದೀನ್,ಸಾಧಿಕ್,ಸನ್ನಾವುಲ್ಲಾ,ಖಾಲಿದ್,ಸುಲೈಮಾನ್,ಅಜೀಜ್,ಅಬ್ಬಾಸ್,ಶರೀಪ್,ಸುಹೈಲ್,ಕುಂಜಿಮೋಣು,ಜಿಯಾ,ಜಿಶಾನ್,ಜೈದಾನ್,ರುಮಾನ್,ರೀಶಾನ್,ಸಾನಿಯಾ,ರಿಮಾಜ್ ಮತ್ತಿತರರು ಇದ್ದರು.