ವಸತಿ ರಹಿತರ ನಿಖರ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ…

310
firstsuddi

ಬೆಂಗಳೂರು: ರಾಜ್ಯದಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಿ, ವಸತಿ ಯೋಜನೆಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ 2011 ರ ಎಸ್ಇಸಿಸಿ ವರದಿಯನ್ವಯ ರಾಜ್ಯದಲ್ಲಿ ಒಟ್ಟು 73.33 ಲಕ್ಷ ಮನೆಗಳ ಬೇಡಿಕೆ ಇದ್ದು, ಈ ವರೆಗೆ 29.38 ಲಕ್ಷ ಮನೆಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 44.06 ಹಾಗೂ ನಗರ ಪ್ರದೇಶದಲ್ಲಿ 29.27 ಲಕ್ಷ ಮನೆಗಳ ಬೇಡಿಕೆ ಇದೆ. ನಗರ ಪ್ರದೇಶದಲ್ಲಿ ಕೇವಲ 3.06 ಲಕ್ಷ ಮನೆ ಹಂಚಿಕೆ ಆಗಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ನಗರ ಪ್ರದೇಶದ ವಸತಿ ಯೋಜನೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದರು.