ಚಿಕ್ಕಮಗಳೂರು : ಮನೆ-ಮನೆಗೆ ತೆರಳಿ ಸರ್ಕಾರದ ಸಾಧನೆಯನ್ನ ಮತದಾರರಿಗೆ ಹೇಳ್ತಿರೋ ಕಾಂಗ್ರೆಸ್ಸಿಗರು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಚಿಕ್ಕಮಗಳೂರಿನ ಕೈಮರ ಹಾಗೂ ಜೋಳದಾಳ್ ಗ್ರಾಮದಲ್ಲಿ ಸರ್ಕಾರದ ಸಾಧನೆಯನ್ನ ಮತದಾರರಿಗೆ ತಿಳಿಸಿದ್ರು. ಇದೇ ವೇಳೆ ಮಾತನಾಡಿದ ವೇಣುಗೋಪಾಲ್ ಹಾಗೂ ಪರಮೇಶ್ವರ್, ರಾಜ್ಯದ ಯಾವುದೇ ಮೂಲೆಗೆ ಹೋದ್ರು ಮತದಾರರಿಂದ ಅದ್ಭುತ ಸ್ಪಂದನೆ ಸಿಕ್ತಿದೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಶತಸಿದ್ಧ ಎಂದು ಭವಿಷ್ಯ ನುಡಿದ್ರು. ವೇಣುಗೋಪಾಲ್ ಹಾಗೂ ಪರಮೇಶ್ವರ್ ಜೊತೆ ಮೈಸೂರು ವಿಭಾಗೀಯ ಕಾಂಗ್ರೆಸ್ ಉಸ್ತುವಾರಿ ವಿಷ್ಣುನಾಥನ್, ಕಾಂಗ್ರೆಸ್ ಮುಖಂಡರಾದ ಬಿ.ಎಲ್ ಶಂಕರ್, ಮೋಟಮ್ಮ, ತರೀಕೆರೆ ಶಾಸಕ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.