ಬೆಂಗಳೂರು- ವಿಧಾನಸಭೆಯಲ್ಲಿ ಮಾತನಾಡಿದ ಆರ್ ಅಶೋಕ್ ಅವರು ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷದಿಂದ ಐದು ಲಕ್ಷದ ವರೆಗೆ ಮಾದಕ ವ್ಯಸನಿಗಳಿದ್ದು, ಇದಕ್ಕೆ 14 ರಿಂದ 30 ವರ್ಷದವರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ವಿದ್ಯಾರ್ಥಿ ಸಮೂಹ ಹಾಗೂ ಯುವಕ ಸಮೂಹ ಹೆಚ್ಚಾಗಿ ಸೇವಿಸುತ್ತಿದ್ದು, ಈ ಡ್ರಗ್ಸ್ ಹಾಗೂ ಮದ್ಯವನ್ನು ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹಾಗೂ ಆತ್ಮಹತ್ಯೆಗೂ ಕೂಡ ಈ ಮಾದಕ ವಸ್ತುಗಳೇ ಪ್ರಮುಖ ಕಾರಣ . ಇದನ್ನು ನಿಯಂತ್ರಣ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಚರ್ಚೆ ನಡೆಸಿದರು.