ಪುತ್ತೂರು- ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಹಿನ್ನಲೆ ಹೆಬ್ಬಾರಬೈಲು ನಿವಾಸಿ ಪಾರ್ವತಿ(65) ಮತ್ತು ಅವರ ಮೊಮ್ಮಗ ಧನುಷ್ (11) ಅವರ ಮನೆ ಮೇಲೆ ತಡೆಗೋಡೆ ರಾತ್ರಿ ಸುಮಾರು 2-30ರ ಸಮಯಕ್ಕೆ ಕುಸಿದಿದ್ದು ಪರಿಣಾಮ ಅಜ್ಜಿ ಹಾಗೂ ಮೊಮ್ಮಗ ಇಬ್ಬರು ಮಣ್ಣಿನಲ್ಲಿ ಹೂತು ಹೋಗಿದ್ದು ತಕ್ಷಣ ಅವರನ್ನು ಸ್ಥಳೀಯರು ಹಾಗೂ ನಗರಸಭೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಅವರನ್ನು ಹೊರ ತೆಗೆದು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದಾರೆ.