ಚಿಕ್ಕಮಗಳೂರು – ಕಾಫಿನಾಡು ಮತ್ತೊಂದು ಕೊಡಗಾಗುತ್ತ ಎಂದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಕಳೆದೆರಡು ತಿಂಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು. ಈ ವರ್ಷದ ರಾಕ್ಷಸ ಮಳೆಗೆ ಮಲೆನಾಡಿನಾದ್ಯಂತ ಅಲ್ಲಲ್ಲೇ ಬೆಟ್ಟ-ಗುಡ್ಡಗಳು ಕುಸಿದಿದ್ರೆ, ಕೆಲ ಭಾಗದಲ್ಲಿ ಭೂಮಿಯೇ ಕುಸಿದಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಜನ ಕತ್ತಲಲ್ಲಿ ಬದುಕುತ್ತಿದ್ದಾರೆ. ಇಂದು ಕೂಡ ಕೊಪ್ಪ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಸುಮಾರು ಎಕರೆಯಷ್ಟು ಭೂಮಿ ಕುಸಿದಿದ್ದು, ಕಾಫಿ ಗಿಡಗಳು ಹಾಗೂ ಅಡಿಕೆ ಮರಗಳು ನಾಶವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ . ಮಲೆನಾಡಲ್ಲಿ ಮಳೆ ಕುಂಠಿತವಾದ್ರು ಭಾರೀ ಗಾಳಿ ಕಂಡ ಮಲೆನಾಡು ಚಿಂತೆಗೀಡಾಗಿದೆ. ಇಂದು ಕೊಪ್ಪ ಹಾಗೂ ಚಿಕ್ಕಮಗಳೂರಿನ ಭೂಮಿ ಕುಸಿತದ ವಿಡಿಯೋ ನೋಡಿ, ಮಲೆನಾಡಿಗರ ಜೀವನ ಎಷ್ಟು ಕಷ್ಟಕರ ಅನ್ನೋದು ಗೊತ್ತಾಗಲಿದೆ