ಬ್ರಿಟನ್‌ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರ, ಹಿಂದೂಸ್ತಾನ್‌ ಹಿಂದೂಗಳ ರಾಷ್ಟ್ರ : ಮೋಹನ್ ಭಾಗವತ್

481

ಇಂದೋರ್‌: ‘ಹಿಂದೂಸ್ತಾನ್‌ ಹಿಂದೂಗಳ ರಾಷ್ಟ್ರ’ ಎಂದು ಆರ್‌ಎಸ್‌‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದು, ಜೊತೆಗೆ ಇದರ ಅರ್ಥ ಹಿಂದೂಯೇತರರಿಗೆ ಅಲ್ಲ ಎಂದಲ್ಲ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌‌ನಲ್ಲಿ ಶುಕ್ರವಾರ ಆರ್‌ಎಸ್‌ಎಸ್‌ ಸ್ವಯಂಸೇವಕರನ್ನು ಉದ್ದೇಶಿಸಿ ಮೋಹನ್‌ ಭಾಗವತ್‌ ಮಾತನಾಡಿದರು. ‘ಜರ್ಮನ್‌ ಜರ್ಮನ್ನರ ರಾಷ್ಟ್ರ, ಬ್ರಿಟನ್‌ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರ, ಅದೇ ರೀತಿ ಹಿಂದೂಸ್ತಾನ್‌ ಹಿಂದೂಗಳ ರಾಷ್ಟ್ರ. ಆದರೆ, ಹಿಂದೂಸ್ತಾನ್‌ ಹಿಂದೂಯೇತರರಿಗೆ ಅಲ್ಲ ಎಂದು ಅರ್ಥವಲ್ಲ’ ಅಂತಾ ಮೋಹನ್‌ ಭಾಗವತ್‌ ತಿಳಿಸಿದ್ದಾರೆ.  ಹಿಂದೂ ಎಂಬ ಪದವು ಭಾರತ ಮಾತೆಯ ಎಲ್ಲಾ ಮಕ್ಕಳು, ಭಾರತೀಯ ಪೂರ್ವಜರ ವಂಶಸ್ಥರು ಹಾಗೂ ಭಾರತೀಯ ಸಂಸ್ಕೃತಿಯನ್ನು ಅನುಸಾರಿಸುವ ಎಲ್ಲರನ್ನೂ ಒಳಗೊಂಡಿದೆ’ ಎಂದು ಭಾಗವತ್‌ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಯಾವುದೇ ಒಬ್ಬ ವ್ಯಕ್ತಿ ಹಾಗೂ ಒಂದು ಪಕ್ಷದಿಂದ ಮಾತ್ರ ದೇಶವನ್ನು ಶ್ರೇಷ್ಠವಾಗಿಸಲು ಸಾಧ್ಯವಿಲ್ಲ ಎಂದಿರುವ ಅವರು, ಜನತೆಯಿಂದಲೇ ಬದಲಾವಣೆ ಆರಂಭವಾಗಬೇಕು ಅಂತಾ ಹೇಳಿದ್ದಾರೆ. ಪ್ರಾಚೀನ ಕಾಲದಲ್ಲಿ ಪ್ರಗತಿಗಾಗಿ ಜನರು ದೇವರ ಮೊರೆಹೋಗುತ್ತಿದ್ದರು. ಆದರೆ, ಈ ‘ಕಲಿಯುಗ’ದಲ್ಲಿ  ಜನತೆ ಸರ್ಕಾರದತ್ತ ನೋಡುತ್ತಿದ್ದಾರೆ. ವಾಸ್ತವವಾಗಿ ಸಮಾಜ ನಡೆದಂತೆ ಸರ್ಕಾರ ನಡೆಯಬಲ್ಲದು. ಸಮಾಜ ಸರ್ಕಾರದ ತಂದೆಯಿದ್ದಂತೆ. ಸರ್ಕಾರದಿಂದಲೇ ಬದಲಾವಣೆ ತರಲು ಸಾಧ್ಯವಿಲ್ಲ. ಸಮಾಜದಲ್ಲೇ ಬದಲಾವಣೆ ಸಾಧ್ಯ ಎಂದು ಮೋಹನ್‌ ಭಾಗವತ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here