ತುಮಕೂರು : ಬಿಜೆಪಿ ಅತೃಪ್ತ ಕಾರ್ಯಕರ್ತರು ಕರ್ನಾಟಕ ಬಿಜೆಪಿಯ ‘ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯ ಬಾಣಸಂದ್ರದಲ್ಲಿ ನವಕರ್ನಾಟಕ ರಥಯಾತ್ರೆ ಆಗಮಿಸುತ್ತಿದ್ದಂತೆಯೇ ಬಿಜೆಪಿ ಉಚ್ಚಾಟಿತ ಮುಖಂಡ ಚೌಧರಿ ನಾಗೇಶ್ ಬೆಂಬಲಿಗರು ನವಕರ್ನಾಟಕ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ. ಘಟನೆಯಲ್ಲಿ ಕಲ್ಲು ರಥಯಾತ್ರೆಗೆ ಬಿದ್ದಿದ್ದು, ಪಕ್ಕದಲ್ಲಿದ್ದ ಸ್ಕಾರ್ಪಿಯೋ ಕಾರಿನ ಗಾಜು ಪುಡಿ-ಪುಡಿಯಾಗಿದೆ.
ಬಿಎಸ್ ಯಡಿಯೂರಪ್ಪ ಅವರು ಬಾಣಸಂದ್ರದಲ್ಲಿ ಕಾರು ನಿಲ್ಲಿಸದಿದ್ದಕ್ಕೆ ಇತ್ತೀಚೆಗೆ ಬಜೆಪಿಯಿಂದ ಉಚ್ಚಾಟಿತವಾಗಿರುವ ನಾಗೇಶ್ ಬೆಂಬಲಿಗರು ರಥಯಾತ್ರೆ ಮೇಲೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದರು. ಸಿಕ್ಕಿದ್ದೇ ಚಾನ್ಸ್ ಅಂತ ಜೆಡಿಎಸ್ ಕಾರ್ಯಕರ್ತರು ಸಹ ಬಿಜೆಪಿ ನವಕರ್ನಾಟಕ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ ಎಂದು ಹೇಳಿಲಾಗುತ್ತಿದೆ.