ಕೂದಲು ಉದುರುತ್ತಿವೆ ಎಂಬ ಖಿನ್ನತೆಯಲ್ಲೇ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ

439

ಮಧುರೈ : ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಕೂದಲು ಉದುರುತ್ತಿವೆ ಎಂಬ ಖಿನ್ನತೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ. ಚರ್ಮ ಸಮಸ್ಯೆಯಿಂದ ತಲೆ ಕೂದಲು ಉದುರುತ್ತಿವೆ ಎಂಬ ಕಾರಣಕ್ಕೆ ಹಲವು ವೈದ್ಯಕೀಯ ಚಿಕಿತ್ಸೆಗಳನ್ನು ಸಂತ್ರಸ್ತ ಆರ್.ಮಿಥುನ್ ರಾಜ್(27) ಪಡೆದಿದ್ದರು. ಈ ನಡುವೆ ಮನೆಯಲ್ಲಿ ಈತನಿಗೆ ವಿವಾಹಕ್ಕೆ ಹುಡುಗಿ ಹುಡುಕಲಾಗುತ್ತಿತ್ತು.ಆದರೆ ತಲೆಕೂದಲು ಉದುರುವ ಸಮಸ್ಯೆ ನಿಲ್ಲದ ಕಾರಣ ಮಿಥುನ್ ಬೇಸತ್ತಿದ್ದರು. ಈ ಸಂಬಂಧಖಿನ್ನತೆಗೊಳಗಾಗಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.