ಮೆಟ್ರೋ ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ…

ಬೆಂಗಳೂರು: ಮೆಟ್ರೊ ರೈಲು ಹಳಿಗೆ ಯುವಕನೊಬ್ಬ ಹಾರಿ  ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದಿದೆ. ಫ್ಲ್ಯಾಟ್​ಫಾರ್ಮ್​ನಲ್ಲಿ ಕೆಲ ಹೊತ್ತು ಕುಳಿತಿದ್ದ ಯುವಕ ಮೆಟ್ರೋ ರೈಲು ಬರುತ್ತಿದ್ದಂತೆ ಹಳಿಗೆ ಹಾರಿದ್ದಾನೆ. ತಕ್ಷಣ ಬ್ರೇಕ್ ಹಾಕಿ ಮೆಟ್ರೋ ರೈಲು ಚಾಲಕ ಯತ್ನಿಸಿದರೂ ಸಾಧ್ಯವಾಗದೆ ಯುವಕನ ರೈಲಿನಡಿ ಸಿಕ್ಕಿದ್ದಾನೆ.  ಯುವಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಯುವಕ ಯಾರು ಯಾಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದು ತಿಳಿದುಬಂದಿಲ್ಲ.