ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಲಾರಿಯೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತ ಪರಿಣಾಮ ಸಾವಿರಾರು ವಾಹನಗಳು ಟ್ರಾಫಿಕ್ ಜಾಮ್ ಗೆ ಸಿಲುಕಿ ಪರದಾಡುವಂತಾಗಿದ್ದು,ಚಾರ್ಮಾಡಿ ಘಾಟಿಯ ಆರಂಭದಿಂದ ಸುಮಾರು 10 ಕಿ.ಮೀ ವರೆಗೆ ವಾಹನಗಳು ನಿಂತಲ್ಲೇ ನಿಂತಿದ್ದು, ಸಾವಿರಾರು ಪ್ರಯಾಣಿಕರು ರಾತ್ರಿಯಿಂದಲೂ ಊಟ ನೀರು ಇಲ್ಲದೆ, ಬೆಳಗ್ಗೆ 8ಗಂಟೆಯ ವರೆಗೆ ನಿಂತಲ್ಲೆ ನಿಂತು ಪರದಾಡುವಂತಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಲಾರಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.