ಚಿಕ್ಕಮಗಳೂರು : ಕಾಂಗ್ರೆಸ್ಸಿಗರ ಬಳಿ ಕಪ್ಪು ಹಣವಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ಸನ್ನ ದೂಷಿಸ್ತಿದ್ರು, ಆದ್ರೀಗ ಕೇಂದ್ರದ ಮಂತ್ರಿಗಳ ಬಳಿಯೇ ಕಪ್ಪು ಹಣವಿರೋ ಮಾಹಿತಿ ಸಿಕ್ಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದ್ರು. ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣವನ್ನ ಹೊರ ತಂದು ಭಯೋತ್ಪಾದನೆಯನ್ನ ನಿಗ್ರಹಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ದೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ನೋಟುಗಳನ್ನ ನಿಷೇಧ ಮಾಡಿ, ಜಿಎಸ್‍ಟಿ ಜಾರಿಗೆ ತಂದಿದೆ. ಆದರೆ, ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರು. ಕೇಂದ್ರ ಸರ್ಕಾರ ಇನ್‍ಕಂ ಟ್ಯಾಕ್ಸ್ ಹಾಗೂ ಸಿಬಿಐನ ದುರುಪಯೋಗ ಪಡಿಸಿಕೊಳ್ತಿದೆ. ಕಳೆದ ಮೂರುವರೆ ವರ್ಷಗಳ ಕೇಂದ್ರದ ಸಾಧನೆ ಕಂಡ ರಾಜ್ಯದ ಜನ ಬಿಜೆಪಿ ಸೋಲಿನ ಬಹುಮಾನ ನೀಡಲಿದ್ದಾರೆ. ಚುನಾವಣೆ ರಣರಂಗ ಕಾಂಗ್ರೆಸ್ ಪರವಿದ್ದು, ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ರು.