ವಿಶ್ವ ವಾಣಿಜ್ಯ ಲಿಂಗಾನುಪಾತ ಸೂಚ್ಯಂಕ : ಚೀನಾ, ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದ ಭಾರತ

674

ನವದೆಹಲಿ/ಜಿನೇವಾ: ವಿಶ್ವ ವಾಣಿಜ್ಯ ಲಿಂಗಾನುಪಾತ ಸೂಚ್ಯಂಕದಲ್ಲಿ ಭಾರತ 21 ಸ್ಥಾನ ಕುಸಿದಿದೆ. ಕಳೆದ ಸಲ 87ನೇ ಸ್ಥಾನದಲ್ಲಿದ್ದ ಭಾರತ ಈ ಸಲ 108ನೇ ಸ್ಥಾನ ಗಳಿಸಿದ್ದು, ಚೀನಾ ಹಾಗೂ ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಪುರುಷ-ಮಹಿಳೆಯರ ಭಾಗವಹಿಸುವಿಕೆ, ಪುರುಷ-ಮಹಿಳಾ ಕಾರ್ಮಿಕರಿಗೆ ನೀಡಲಾಗುವ ವೇತನ, ಆರೋಗ್ಯ-ಶಿಕ್ಷಣ- ಕಚೇರಿ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪುರುಷ-ಮಹಿಳಾ ಪ್ರಾತಿನಿಧ್ಯ ಇತ್ಯಾದಿಗಳನ್ನು ಅವಲೋಕಿಸಿ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಈ ಸೂಚ್ಯಂಕ ಸಿದ್ಧಪಡಿಸುತ್ತದೆ. ಭಾರತದಲ್ಲಿ ಮಹಿಳೆಯರಿಗೆ ಆರ್ಥಿಕ ಚಟುವಟಿಕೆಗಳಲ್ಲಿ ಕಮ್ಮಿ ಪ್ರಾತಿನಿಧ್ಯ ಇರುವುದು ಹಾಗೂ ಅವರ ವೇತನ ತೀರಾ ಕಮ್ಮಿ ಇರುವುದರಿಂದ ಭಾರತ 21 ಸ್ಥಾನ ಕುಸಿದಿದೆ ಎಂದು ವಿಶ್ಲೇಷಿಸಲಾಗಿದೆ.

LEAVE A REPLY

Please enter your comment!
Please enter your name here