ಸಿಸಿ ಕ್ಯಾಮರಾಗಳು ಒದಗಿಸಿದ್ದೇವೆ ನೀವು ಸಾಕ್ಷಿಯನ್ನು ಸೃಷ್ಟಿಸಬೇಡಿ, ಪ್ರಾಮಾಣಿಕತೆಯಿಂದ ತನಿಖೆ ಮಾಡಿ

528

ಚಿಕ್ಕಮಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಬಕಾರಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಾಗಾರ ಅಕ್ಟೋಬರ್ ೮ ರಂದು ಜಿಲ್ಲಾ ನ್ಯಾಯಾಲಯದ ಸಮುಚ್ಛಯದಲ್ಲಿನ ಪರ್ಯಾಯ ವಾಜ್ಯಗಳ ಪರಿಹಾರ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿ.ಕಾ.ಸೇ.ಪ್ರಾ. ದ ಅಧ್ಯಕ್ಷೆ ಪ್ರಭಾವತಿ ಎಂ. ಹಿರೇಮಠ್ ಜನಸಾಮಾನ್ಯರ ಕಣ್ಣಿನ ಎದುರಿಗೆ ಅಪರಾಧ ನಡೆಯುತ್ತವೆ ಅದನ್ನು ನೋಡಿದವರ ಮನಸ್ಸಿಗೆ ಬಹಳ ನೋವನ್ನು ಉಂಟುಮಾಡುತ್ತದೆ ಎಂದರು.

ಗಾಂಜಾ ಹಾಗೂ ನಾರ್ಕೋಟಿಕ್ಸ್ ಡ್ರಗ್ಸ್‌ಗಳ ಬಳಕೆ ರಾಜ್ಯಾದ್ಯಂತ ಹೆಚ್ಚುತ್ತಿರುವುದರಿಂದ ಇಂತಹ ಅಪರಾಧಗಳನ್ನು ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕ್ರಮಬದ್ಧವಾಗಿ ನಿಯಂತ್ರಿಸುವುದು ಹಾಗೂ ತಡೆಗಟ್ಟುವುದರ ಬಗ್ಗೆ ಗಮನಹರಿಸಬೇಕು. ಇಲಾಖೆಗೆ ಸಿಸಿ ಕ್ಯಾಮರಾಗಳು ಹಾಗೂ ಕ್ಯಾಮರಾಗಳನ್ನು ಒದಗಿಸಿದ್ದೆವೆ ನೀವು ಸಾಕ್ಷಿಯನ್ನು ಸೃಷ್ಟಿಸಬೇಡಿ, ಪ್ರಾಮಾಣಿಕತೆಯಿಂದ ತನಿಕೆ ಮಾಡಿ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಕೆ. ಮಾತನಾಡಿ ಪ್ರಕರಣ ದಾಖಲಾಗದ ಕಾನೂನಾತ್ಮಕವಾಗಿ ಹೇಗೆ ಆರೋಪಿಯನ್ನು ಬಂಧಿಸಬೇಕು ಯಾವ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂಬ ಅರಿವು ತನಿಖಾಧಿಕಾರಿಗೆ ಮುಖ್ಯ ಇಂದು ಕಾರ್ಯಾಗಾರದಲ್ಲಿ ಶ್ರದ್ಧೆ ವಹಿಸಿ ಮಾಹಿತಿಗಳನ್ನು ಪಡೆದುಕೊಂಡು ವೈಫಲ್ಯಗಳನ್ನು ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮಹಿಳೆಯರ ಅಪರಾಧಗಳು ಹೆಚ್ಚಾಗಿದ್ದು ಬಹಳಷ್ಟು ನೋವನ್ನು ಉಂಟು ಮಾಡುತ್ತದೆ ಎಂದರು.

ಅಬಕಾರಿ ಉಪ ಆಯುಕ್ತ ಮೋಸೆಸ್ ಸ್ಯಾಮುಯಲ್ ಮಾತನಾಡಿ ಮೂಡಿಗೆರೆ ತಾಲ್ಲೂಕಿನಲ್ಲಿ ಕಳ್ಳಬಟ್ಟಿ ಸಮಸ್ಯೆಯು ಅಧಿಕವಾಗಿದ್ದು ೨೦೧೬-೧೭ ನೇ ಸಾಲಿನಲ್ಲಿ ೧೪೭ ಅಬಕಾರಿ ಇಲಾಖೆಯಿಂದ ದಾಖಲು ಮಾಡಿಕೊಳ್ಳಲಾಗಿದೆ ೪,೦೬೦ ಲೀ. ಕಳ್ಳಬಟ್ಟಿ, ೨೧೩ ಲೀ. ಅಕ್ರಮ ಮದ್ಯ ಹಾಗೂ ೪ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಕಾ.ಸೇ.ಪ್ರಾ ದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ, ನ್ಯಾಯಧೀಶ ದೇವೆಂದ್ರ ನಿವೃತ್ತ ಸರ್ಕಾರಿ ಅಭಿಯೋಜಕ ವಿ.ಜಿ. ಬಂಡಿ, ಸಿ.ಐ.ಡಿ, ಕಾರ್ಲ್ಸ್‌ಟೌನ್ ಮತ್ತು ಸರ್ಕಾರಿ ಅಭಿಯೋಜಕ ವಿ.ಎಸ್ ಭಟ್, ಸರ್ಕಾರಿ ಅಭಿಯೋಜಕ ಆನಂದ್ ಕುಮಾರ್,  ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here