ದಾವಣಗೆರೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಭರತ್ ಕಾಲೋನಿಯಲ್ಲಿ ನಡೆದಿದೆ.
ಕೃಷ್ಣಾ ನಾಯ್ಕ್, ಪತ್ನಿ ಸುಮಾ ಮತ್ತು ದೃವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗು ಮತ್ತು ತನ್ನ ಹೆಂಡತಿಗೆ ವಿಷ ಕುಡಿಸಿ ಕೃಷ್ಣಾ ನಾಯ್ಕ್ ನೇಣು ಹಾಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಆರ್ ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣಾ ನಾಯ್ಕ್ ಲಾರಿ ಚಾಲಕನಾಗಿದ್ದ. ಕೆಲ ದಿನಗಳಿಂದ ಸುಮಾ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಕೃಷ್ಣ ನಾಯ್ಕ್, ಪತ್ನಿ ಗುಣಮುಖಳಾಗುವುದಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದನಂತೆ. ಆದರೂ ಆಕೆ ಚೇತರಿಸಿಕೊಂಡಿರಲಿಲ್ಲ. ಇದರಿಂದ ಮನನೊಂದು ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ಮೂಡಿದೆ.
ಆತ್ಮಹತ್ಯೆಗೆ ಕಾರಣ ಏನೆಂಬುದು ಪೊಲೀಸ್ ತನಿಖೆ ನಂತರವಷ್ಟೇ ಹೊರ ಬರಬೇಕಿದೆ.










