ಕಾಫಿನಾಡಿನಲ್ಲಿ ಸುಖಾಂತ್ಯವಾಗಿದ್ದ ಹಿಜಾಬ್ ಗಲಾಟೆ ಮತ್ತೆ ಶುರು…

104
firstsuddi

ಚಿಕ್ಕಮಗಳೂರು : ಈ ಹಿಂದೆ ಕೊಪ್ಪ ಕಾಲೇಜಿನಲ್ಲಿ ಸುಖಾಂತ್ಯವಾಗಿದ್ದ ಹಿಜಾಬ್ ಗಲಾಟೆ, ಇದೀಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿದೆ.

ನಗರದ ಇಂದಾವರ ದೊಡ್ದಸಿದ್ದಲಿಂಗೇಗೌಡ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯ ವಿರುದ್ಧ ಯುವಕರು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಯಾರಿಗೂ ಹಿಜಾಬ್ ಧರಿಸಲು ಅವಕಾಶ ಕೊಡದಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದು, ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.