ಚಿಕ್ಕಮಗಳೂರು : ನಗರದ ಪೆನ್ಷನ್ ಮೊಹಲ್ಲಾ ಅಯ್ಯಪ್ಪನಗರದಲ್ಲಿ ಹರಿಯುವ ನೀರಾವರಿ ಕಾಲುವೆ ದುರಸ್ಥಿ ಹಾಗೂ ಹೂಳು ತೆಗೆಯುವ ಸಂಬಂಧ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಿದ ನಂತರ ಒಂದು ವಾರದೊಳಗೆ ಕಾಲುವ ದುರಸ್ಥಿಗೊಳಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನವೀನ್ಶೆಟ್ಟಿ ಹೇಳಿದ್ದಾರೆ.
ಕಳೆದ 2-3 ವರ್ಷಗಳಿಂದ ಹೂಳು ತೆಗೆಯದೇ ಅವ್ಯವಸ್ಥೆಯಾಗಿದ್ದು ಇದೀಗ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಿದ ನಂತರ ಕಾಲುವೆ ದುರಸ್ಥಿಗೊಳಿಸಿರುವುದು ಸ್ಥಳೀಯ ನಿವಾಸಿಗಳಲ್ಲಿ ಸಂತಸ ತಂದಿದೆ ಎಂದರು.
ಅದೇ ರೀತಿ ಮುಂದಿನ ದಿನಗಳಲ್ಲಿ ಕಾಲುವೆಯನ್ನು ಉತ್ತಮ ಗುಣಮಟ್ಟದಲ್ಲಿ ಕಾಂಕ್ರೀಟೀಕರಣ ಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದರ ಜೊತೆಗೆ ಸ್ಥಳೀಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಉಬೆದ್, ಆಕಾಶ್, ಜಾನ್, ಆಲಿ, ಚಂದ್ರಶೇಖರ್ ತೆರದಾಳ್ ಮತ್ತಿತರರು ಹಾಜರಿದ್ದರು.










