ಕುತೂಹಲಕಾರಿ ಪೋಸ್ಟರ್ ಅನಾವರಣಗೊಳಿಸಿದ ಯಶ್: ಟಾಕ್ಸಿಕ್ ಟೀಮ್‍ನಿಂದ ಸಿಕ್ತು ಸಿಹಿ ಸುದ್ದಿ.

15

ನ್ಯಾಷನಲ್ ಸ್ಟಾರ್ ಯಶ್ ಅವರು ಇದೇ ಜನವರಿ 8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಟಾಕ್ಸಿಕ್ ಚಿತ್ರದ ಕುರಿತು ಏನಾದರೂ ಅಪ್‍ಡೇಟ್ ಸಿಗಬಹುದು ಎಂದು ನಿರೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿತ್ರತಂಡದ ಕಡೆಯಿಂದ ಬಿಗ್ ನ್ಯೂಸ್‍ವೊಂದು ಸಿಕ್ಕಿದೆ. ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಯಶ್ ಹುಟ್ಟುಹಬ್ಬದ ದಿನದಂದು ಬೆಳಗ್ಗೆ 10:25ಕ್ಕೆ ಗೀತು ಮೋಹನ್‍ದಾಸ್ ನಿರ್ದೇಶನದ ಟಾಕ್ಸಿಕ್ ಕುರಿತು ಅಪ್‍ಡೇಟ್ ಸಿಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಲಾಗಿದೆ. ಯಶ್ ಕೂಡ ಇದೇ ವರದಿಯನ್ನು ಹಂಚಿಕೊಂಡಿದ್ದಾರೆ. ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಇನ್ನೂ ಜನವರಿ 8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‍ಡೇಯನ್ನು ಆಚರಣೆ ಮಾಡುವುದಿಲ್ಲ ಎಂದು ಫ್ಯಾನ್ಸ್ ಗೆ ಯಶ್ ಈಗಾಗಲೇ ತಿಳಿಸಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದರು.