ಚಿಕ್ಕಮಗಳೂರು :ಇಲ್ಲಿವರೆಗೂ ಜನ ಸರ್ಕಾರಿ ಕಚೇರಿಗಳಿಗೆ ಚಪ್ಪಲಿ ಸವೆಸುತ್ತಿದ್ದರು ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ:ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ.

578

ಚಿಕ್ಕಮಗಳೂರು : ಇನ್ಮುಂದೆ ನಮ್ಮ ಎಲ್ಲಾ ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು. ಜನ ಹಳ್ಳಿಗಳಿಂದ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗೆ ಪೆನ್ಷನ್, ಖಾತೆ, ಕಂದಾಯಕ್ಕಾಗಿ ಚಪ್ಪಲಿ ಸವೆಸುತ್ತಿದ್ದರು. ಇನ್ಮುಂದೆ ಅಧಿಕಾರಿಗಳು ಕೂಡ ಚಪ್ಪಲಿಯನ್ನ ಸವೆಸಿ ಹಳ್ಳಿ ಕಡೆ ಪ್ರಯಾಣ ಮಾಡಲಿ. ಅವರಿಗೂ ಹಳ್ಳಿಯ ಕಷ್ಟಸುಖ ಗೊತ್ತಾಗಲಿ. ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಮೂರನೇ ವಾರ ಶನಿವಾರ ಹಳ್ಳಿಗೆ ನಡೆಯಿರಿ, ಹಳ್ಳಿಗಳಲ್ಲಿ ಜಿಲ್ಲಾಧಿಕಾರಿ, ಮನೆ ಬಾಗಿಲಿಗೆ ಜಿಲ್ಲಾಧಿಕಾರಿ, ಹಳ್ಳಿಕಟ್ಟೆಗೆ ಜಿಲ್ಲಾಧಿಕಾರಿ ಪ್ರಯಾಣ ಎಂಬ ಯೋಜನೆಯನ್ನ ಜಾರಿಗೆ ತರಲಾಗುವುದು ಎಂದರು. ಜೊತೆಗೆ ತಹಶೀಲ್ದಾರ್, ಎಸಿ, ಡಿಡಿಎಲ್‍ಆರ್ ಕೂಡ ಅದೇ ಸಂದರ್ಭದಲ್ಲಿ ಬೇರೆ-ಬೇರೆ ಸ್ಥಳದಲ್ಲಿ ಇರಬೇಕು. ಮೂರನೇ ಶನಿವಾರ ಎಲ್ಲಾ ಹಿರಿಯ ಅಧಿಕಾರಿಗಳು ಹಳ್ಳಿಗಳಲ್ಲಿ, ಗ್ರಾಮದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಇರಬೇಕು. ಯಾವ ಜಿಲ್ಲಾಧಿಕಾರಿಗೆ ಪೂರ್ತಿ ದಿನ ಇರಲು ಸಾಧ್ಯವಿರುತ್ತೋ ಅವರು ರಾತ್ರಿ ಕೂಡ ಅಲ್ಲೇ ಉಳಿಯಬಹುದು. ಕಂದಾಯ ಇಲಾಖೆಯನ್ನ ಹಳ್ಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶ ಇಟ್ಟುಕೊಂಡು ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ ಎಂದರು. ಇದೇ 27 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗವನ್ನ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.