ಚಿಕ್ಕಮಗಳೂರು : ದೀನ ದಲಿತರ ಸೇವೆ ನಮ್ಮನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ : ಆರ್.ಶಾಂತರಾಜ್.

127
firstsuddi

ಚಿಕ್ಕಮಗಳೂರು : ದೀನ ದಲಿತರು, ದುರ್ಬಲರು, ರೋಗಿಗಳು ಮತ್ತು ಅಸಹಾಯಕರ ಸೇವೆಯಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ಚಿಕ್ಕಮಗಳೂರು ಮಲ್ಟಿ ಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ನಿರ್ದೇಶಕ ಫಾದರ್ ಆರ್.ಶಾಂತರಾಜ್ ಹೇಳಿದರು.

ನಗರದ ಸಂತಜೋಸೆಫರ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇಂದು ಕೊರೊನಾ ಬಾಧಿತ ಬಡ ಕುಟುಂಬಗಳಿಗೆ ಸೊಸೈಟಿ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಅಧಿಕಾರ, ಅಂತಸ್ತು, ಹಣ ನಮಗೆ ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆಯಾದರೂ ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ನೀಡುವುದಿಲ್ಲ. ಹಣ, ಅಧಿಕಾರ, ಅಂತಸ್ತು ಬದುಕಿನ ಕೊನೆಯವರೆಗೂ ನಮ್ಮೊಂದಿಗೆ ಇರುವುದಿಲ್ಲ. ಆದರೆ ದೀನ ದಲಿತರ ಸೇವೆ ನಮ್ಮನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ ಎಂದರು.

ಣವಂತರು ಈ ಸತ್ಯವನ್ನು ಅರಿಯಬೇಕು. ದೀನರು, ದುರ್ಬಲರು, ರೋಗಿಗಳು ಮತ್ತು ಅಸಹಾಯಕರಿಗೆ ಸಹಾಯಹಸ್ತವನ್ನು ಚಾಚಬೇಕು. ಅವರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷದಲ್ಲಿರುವ ಕೋವಿಡ್ ಸೋಂಕಿತರ ಕುಟುಂಬಗಳು, ವಿಕಲಚೇತನರು, ವಿಧವೆಯರು ಮತ್ತು ಮಂಗಳಮುಖಿಯರಿಗೆ ಸಮಾರಂಭದಲ್ಲಿ ಸೊಸೈಟಿ ವತಿಯಿಂದ ಪಡಿತರ ಕಿಟ್‍ಗಳನ್ನು ವಿತರಿಸಲಾಯಿತು.

ಸೊಸೈಟಿಯ ಲೆಕ್ಕಾಧಿಕಾರಿ ವಿಕ್ಟೋರಿಯಾ ಡಿಸೋಜಾ, ಕಾರ್ಯಕ್ರಮದ ಸಂಯೋಜಕರಾದ ಮೋಹನ್, ಲೈಸಾಜಾಯ್, ಶಾಲಿನಿ, ವಿನೀತ್ ಉಪಸ್ಥಿತರಿದ್ದರು.