ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ದಂಡ ಪಾವತಿಸಲು ಫೆ. 11ರ ವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಿ ಸಹಿ ಸುದ್ದಿ ನೀಡಿದೆ.
ಯಾವುದಕ್ಕೆ ಎಷ್ಟು ದಂಡ?
ಪುಟ್ ಪಾತ್ ಪಾರ್ಕಿಂಗ್
1,000 ರೂ. – 500 ರೂ.
ಡೆಫೆಕ್ಟೀವ್ ಪ್ಲೇಟ್
ಮೊದಲ ತಪ್ಪು: 500 – 250
ಎರಡನೇ ತಪ್ಪು: 1,500 – 750
ಜಂಪಿಂಗ್ ಸಿಗ್ನಲ್ : 500 – 250
ಓವರ್ ಸ್ಪೀಡ್ : 1,000 – 500
ಒನ್ ವೇ
ಫಸ್ಟ್ ಟೈಂ: 500 – 250
ರಿಪೀಟೆಡ್: 1500 – 750
ಮೊಬೈಲ್ ಬಳಕೆ (LMV)
ಫಸ್ಟ್ ಟೈಂ: 3,000 – 1,500
ರಿಪೀಟೆಡ್: 10,000 – 5,000
ಹೆಲ್ಮೆಟ್ ಧರಿಸದೇ ಚಾಲನೆ : 500 – 250
ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ:
1. ಕರ್ನಾಟಕ ಓನ್ ವೆಬ್ಸೈಟ್ ನಲ್ಲಿ ವಿವರಗಳನ್ನು ಪಡೆದುಪಾವತಿಸಬಹುದಾಗಿದೆ.
2. ಪೇ ಟಿಎಂ ಆ್ಯಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
3. ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿರುತ್ತದೆ. ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.
4. ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ. ಈ ನಿಯಮ 11-02-2023 ವರಗೆ ಮಾತ್ರ ಅನ್ವಯವಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಒಂದೇ ದಿನ ಹರಿದು ಬಂತು ಕೋಟಿ ಕೋಟಿ ಹಣ : ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ ನೀಡಿದ ಬೆನ್ನಲ್ಲೇ ನಿನ್ನೆ ಒಂದೇ ದಿನ ಕೋಟಿ ಕೋಟಿ ಹಣ ಹರಿದು ಬಂದಿದೆ. ನಿನ್ನೆ 5 ಕೋಟಿ 61 ಲಕ್ಷದ 55 ಸಾವಿರ ದಂಡದ ಹಣ ಸಂಗ್ರಹವಾಗಿದೆ. ಒಟ್ಟು 2 ಲಕ್ಷ 1 ಸಾವಿರದ 828 ಪ್ರಕರಣಗಳ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 89,699 ಪ್ರಕರಣಗಳಿಂದ 2,17,24,990 ಕೋಟಿ ರೂ, ಪೇ ಟಿಎಂ ಮೂಲಕ 1,04,273 ಪ್ರಕರಣದಿಂದ 3, 23,68,900 ಕೋಟಿ, ಸಂಚಾರ ನಿರ್ವಹಣಾ ಕೆಂದ್ರದಲ್ಲಿ 540 ಪ್ರಕರಣ ದಂಡ ಪಾವತಿಯಾಗಿದ್ದು 89,650 ರೂ ಮತ್ತು ಬೆಂಗಳೂರು ಒನ್ ನಲ್ಲಿ 7,316 ಪ್ರಕರಣದಿಂದ 16,21,600 ರೂ ದಂಡ ಸಂಗ್ರಹವಾಗಿದೆ.










