ಡಾಲಿ ಧನಂಜಯ್ ಗೆ ಕೂಡಿಬಂತು ಕಂಕಣಭಾಗ್ಯ: ಹಬ್ಬದ ದಿನವೇ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ ಡಾಲಿ.

30

ಸ್ಯಾಂಡಲ್‍ವುಡ್‍ನ ಆ್ಯಕ್ಟರ್, ಡೈರೆಕ್ಟರ್ ಡಾಲಿ ಧನಂಜಯ್ ಅವರು ತಮ್ಮ ಬಹುಕಾಲದ ಗೆಳತಿ, ಡಾಕ್ಟರ್ ಜೊತೆ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಧನಂದಯ ಮದುವೆ ಸುದ್ದಿ ಹಂಚಿಕೊಂಡಿದ್ದಾರೆ.
ಡಾಲಿ ಮತ್ತು ಧನ್ಯತಾ ಇಬ್ಬರಿಗೂ ಅನೇಕ ವರ್ಷಗಳಿಂದ ಪರಿಚಯ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಕವಿ ದ.ರಾ.ಬೇಂದ್ರೆ ಅವರ ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ ಧನಂಜಯ. ಮುಂದಿನ ವರ್ಷ ಫೆಬ್ರವರಿಯಲ್ಲಿ ಇವರಿಬ್ಬರು ಮದುವೆ ಆಗಲಿದ್ದಾರೆ. ಫೆಬ್ರವರಿ 16 ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‍ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಅದ್ಧೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ, ನಂತರ ಅದೇ ದಿನ ಅದೇ ಗ್ರೌಂಡ್‍ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.