ಮೈಸೂರು : ಮಣಿಕಂಠ ಎಂಬ ವ್ಯಕ್ತಿ ತನ್ನ ತಾಯಿ, ಗರ್ಭಿಣಿ ಪತ್ನಿ ಹಾಗೂ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದಿರುವ ಘಟನೆ ಸರಗೂರು ತಾಲ್ಲೂಕಿನ ಸ್ವಾಮಿಗೌಡನಹುಂಡಿಯಲ್ಲಿ ನಡೆದಿದೆ.
ತಾಯಿ ಕೆಂಪನಂಜಮ್ಮ (65), ತುಂಬು ಗರ್ಭಿಣಿಯಾದ ಪತ್ನಿ ಗಂಗಾ (28) ಮಕ್ಕಳಾದ ಸಾಮ್ರಾಟ್ (ಎರಡೂವರೆ ವರ್ಷ) ಹಾಗೂ ರೋಹಿತ್ (ಒಂದೂವರೆ ವರ್ಷ) ಕೊಲೆಯಾದ ದುರ್ದೈವಿಗಳು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ಮಣಿಕಂಠ ಸ್ಥಳದಿಂದ ಪರಾರಿಯಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.










