ಬೆಂಗಳೂರು : ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೊಡಿಗೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ.
ರಾಜಣ್ಣ ಅಮಾನತುಗೊಂಡ ಇನ್ಸ್ಪೆಕ್ಟರ್. ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ದೂರು ಸ್ವೀಕರಿಸಿದ್ದ ಇನ್ಸ್ಪೆಕ್ಟರ್ ಆಕೆಯ ನಂಬರ್ ಪಡೆದು ಅಸಭ್ಯವಾಗಿ ಚಾಟಿಂಗ್ ಮಾಡಲು ಶುರು ಮಾಡಿದ್ದಾರೆ. ಒಂದು ದಿನ ಠಾಣೆಗೆ ಕರೆಯಿಸಿ ಆಕೆಯ ಕೈಗೆ ಡ್ರೈಫ್ರೂಟ್ಸ್ ಇದ್ದ ಬಾಕ್ಸ್ ಕೊಟ್ಟು ರೂಮಿಗೆ ಕರೆದಿದ್ದರು. ಈ ಸಂಬಂಧ ಮಹಿಳೆ ಸಾಕ್ಷಿ ಸಮೇತ ಡಿಸಿಪಿ ಲಕ್ಷ್ಮೀ ಪ್ರಸಾದ್ ಗೆ ದೂರು ನೀಡಿದ್ದಾರೆ.
ಮಹಿಳೆ ದೂರಿನ ಮೇರೆಗೆ ಪ್ರಾಥಮಿಕ ತನಿಖೆಗೆ ಡಿಸಿಪಿ ಆದೇಶಿಸಿದ್ದರು. ಯಲಹಂಕ ಎಸಿಪಿಗೆ ತನಿಖೆಗೆ ಸೂಚಿಸಿದ್ದರು. ಬಳಿಕ ಠಾಣೆಯ ಸಿಸಿಟಿವಿ ಪಡೆದು ತನಿಖೆ ನಡೆಸಿದ ಯಲಹಂಕ ಎಸಿಪಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ರಾಜಣ್ಣನನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.