ಬೆಂಗಳೂರು : ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಗುತ್ತಿಗೆದಾರ ಸಂತೋಷ್ ಅವರೇ ತಪ್ಪು ಮಾಡಿದ್ದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಡಿ.ಕೆ ಸುರೇಶ್, ಹನುಮಂತಯ್ಯ ಅವರನ್ನು ಸಂತೋಷ್ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಕಾಪಿಯನ್ನು ನಾನು ತೆಗೆದುಕೊಂಡು ಗುತ್ತಿಗೆದಾರ ಸಂತೋಷ್ ವಿರುದ್ಧ ಕೋರ್ಟ್ ನಲ್ಲಿ ಮಾನನಷ್ಟ ಕೇಸ್ ಹಾಕಿದ್ದೇನೆ. ಕೋರ್ಟ್ ನಿಂದ ನೋಟಿಸ್ ಹೋದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಟಿಸ್ ಹೋದ ನಂತರ ಗಾಬರಿಯಾಗಿದ್ದಾರೆ ಅನಿಸುತ್ತೆ. ಸಂತೋಷ್ ಆತ್ಮಹತ್ಯೆಗೂ, ನನಗೂ ಏನೂ ಸಂಬಂಧವಿಲ್ಲ. ಸಂತೋಷ್ ಅವರು ಯಾರೂ ಎಂದು ನನಗೆ ಗೊತ್ತಿಲ್ಲ ಎಂದರು.










