ಪಾರ್ಸಲ್ ಕೊಡಲು ತಡ ಮಾಡಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ ಕೊಂದ ಡೆಲಿವರಿ ಬಾಯ್!

87
firstsuddi

ನವದೆಹಲಿ : ಪಾರ್ಸಲ್ ಕೊಡಲು ತಡ ಮಾಡಿದ್ದಕ್ಕೆ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸುನಿಲ್ ಅಗರ್ವಾಲ್ ಕೊಲೆಯಾದ ವ್ಯಕ್ತಿ. ಮಿತ್ರ ಎಂಬ ಸ್ವಂತ ರೆಸ್ಟೋರೆಂಟ್ ಹೊಂದಿದ್ದ ಸುನಿಲ್ ಅಗರ್ ವಾಲ್ ನಿನ್ನೆ ರಾತ್ರಿ ಫುಡ್ ಡೆಲಿವರಿ ಬಾಯ್ ನಿಂದ ಕೊಲೆಯಾಗಿದ್ದಾರೆ.

ಸ್ವಿಗ್ಗಿಯಿಂದ ಮಿತ್ರ ರೆಸ್ಟೋರೆಂಟ್ ಗೆ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ಆರ್ಡರ್ ಬಂದಿತ್ತು. ಆ ಆರ್ಡರ್ ಅನ್ನು ತೆಗೆದುಕೊಂಡು ಹೋಗಲು ಡೆಲಿವರಿ ಬಾಯ್ ಮಂಗಳವಾರ ರಾತ್ರಿ ಬಂದಿದ್ದ. ಆದರೆ ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿದ್ದು, ಪೂರಿ, ಸಬ್ಜಿ ಪಾರ್ಸಲ್ ರೆಡಿ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್ ನವರು ಹೇಳಿದ್ದರು.

ಇದೇ ವಿಷಯಕ್ಕೆ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಮನಬಂದಂತೆ ಬೈದಿದ್ದ. ಇದರಿಂದ ಕೋಪಗೊಂಡ ಸಿಬ್ಬಂದಿ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದ. ಜಗಳ ನಿಲ್ಲಿಸಲು ಅಲ್ಲಿಗೆ ಬಂದ ಸುನಿಲ್ ಹಣೆಗೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಗುಂಡು ಹಾರಿಸಿದ್ದಾನೆ. ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದು, ಡೆಲಿವರಿ ಬಾಯ್ ನಾಪತ್ತೆಯಾಗಿದ್ದಾನೆ. ಸದ್ಯ ಆತನನ್ನು ಹಿಡಿಯಲು ಮೂರು ಪೊಲೀಸರ ತಂಡವನ್ನು ರಚಿಸಲಾಗಿದೆ.