ಪುನೀತ್‍ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಕೊಡಲು ತೀರ್ಮಾನ : ಸಚಿವ ಎಸ್.ಟಿ.ಸೋಮಶೇಖರ್.

106
firstsuddi

ಬೆಂಗಳೂರು : ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಕೊಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಟ ಪುನೀತ್ ರಾಜ್ ಕುಮಾರ್ ಅವರು ನಂದಿನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅದನ್ನು ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ ಎಂದರು.

ಪ್ರತಿ ವರ್ಷ ಆರು ಮಂದಿಗೆ ಪ್ರಶಸ್ತಿ ನೀಡುತ್ತಿದ್ದೆವು. ಆದರೆ, ಕಳೆದ ವರ್ಷ ಜಿಲ್ಲೆಗೆ ಒಬ್ಬರು ಅಂತಾ ನಿರ್ಧರಿಸಿದ್ದೇವೆ. 40 ರಿಂದ 50 ಮಂದಿಗೆ ಪ್ರಶಸ್ತಿ ಕೊಡುತ್ತೇವೆ. 15 ಗ್ರಾಂ ಚಿನ್ನದ ಪದಕ, ಪ್ರಮಾಣಪತ್ರ ನೀಡಿ ಗೌರವಿಸುತ್ತೇವೆ. ಮಾರ್ಚ್ 20ರಂದು ಕೆಂಗೇರಿ ಉಪನಗರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.