ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಕಾರ್ಯ…

99
firstsuddi

ಬೆಂಗಳೂರು : ನಟ ಪುನೀತ್ ರಾಜ್‍ಕುಮಾರ್ ಅವರು ಅಗಲಿ ಇಂದಿಗೆ ಐದು ದಿನವಾಗಿದ್ದು, ಪುನೀತ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.

ಎಡೆ ಇಡಲು ದೊಡ್ಮನೆ ಕುಟುಂಬಸ್ಥರು ಕೆಲವು ಬಗೆಯ ಅಡುಗೆ ಮಾಡಿ ತಂದಿದ್ದರು. ಪುನೀತ್ ಅವರಿಗೆ ಪ್ರಿಯವಾದಂತಹ ಕಬಾಬು , ಬಿರಿಯಾನಿ , ಇಡ್ಲಿ , ಕಾಳು ಗೊಜ್ಜು , ಮೊಟ್ಟೆ ಬಿರಿಯಾನಿ , ಬಜ್ಜಿ , ಐದಾರು ವೈರಟಿ ಸಿಹಿ ತಿನಿಸು, ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್, ಸುಮಾರು 50 ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಬಾಳೆ ಎಲೆಯಲ್ಲಿಟ್ಟು ಬಡಿಸಿ ಹಾಲು, ತುಪ್ಪ ಕಾರ್ಯ ನೆರವೇರಿಸಿದರು.

ಇನ್ನೂ ರಾಜ್ ಕುಟುಂಬದ ಪೂರ್ಣಿಮ, ಲಕ್ಷ್ಮೀ, ರಾಮ್ ಕುಮಾರ್ ಫ್ಯಾಮಿಲಿ, ಮಾವ ಚಿನ್ನೇಗೌಡ ಕುಟುಂಬ, ಗಾಜನೂರು ಸಂಬಂಧಿಕರು, ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್ ಮಗಳು ನಿವೇದಿತಾ, ವಿನಯ್ ರಾಘವೇಂದ್ರ, ಯುವರಾಜ್ ಕುಮಾರ್, ಶ್ರೀ ಮುರುಳಿ, ವಿನಯ್ ರಾಘವೇಂದ್ರ , ಸಚಿವ ಗೋಪಾಲಯ್ಯ, ಮಧು ಬಂಗಾರಪ್ಪ, ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.