ಪ್ರತಿ ವರ್ಷವೂ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ : ಲಹರಿ ವೇಲು.

80
firstsuddi

ಬೆಂಗಳೂರು : ಸೂರ್ಯ ಚಂದ್ರರಿರುವ ತನಕ ಪ್ರತಿ ವರ್ಷವೂ ಚಾಮರಾಜಪೇಟೆಯ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ತಿರಂಗ ಹಾರಿಸೋಕೆ ನಾವು ಸತತ ಪ್ರಯತ್ನ ಮಾಡಿದ್ದೇವೆ. ಕೊನೆಗೂ ಶಾಂತಿಯುತವಾಗಿ ಧ್ವಜಾರೋಹಣ ಮಾಡಿದ್ದೇವೆ. ಗಣೇಶೋತ್ಸವ ನಡೆಸಲು ಅರ್ಜಿ ಸಲ್ಲಿಸಿದ್ದೇವೆ. ಈಗಾಗಲೇ ನ್ಯಾಯಾಂಗದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗ ಹೋರಾಟಕ್ಕೆ ಫಲ ಸಿಕ್ಕಿದ್ದು, ಲಹರಿ ಸಂಸ್ಥೆಯಿಂದ ಗಣೇಶ ಮೂರ್ತಿಯನ್ನು ಪ್ರತಿ ವರ್ಷವೂ ಪ್ರತಿಷ್ಠಾಪನೆ ಮಾಡಲಿದ್ದೇವೆ. ಜಮೀರ್ ಸೇರಿದಂತೆ ಎಲ್ಲರೂ ಹಬ್ಬಕ್ಕೆ ಬಂದು ಆರತಿ ತೆಗೆದುಕೊಂಡು ಹೋಗಬಹುದು. ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ತಿಳಿಸಿದರು.

ಚಾಮರಾಜಪೇಟೆಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಕೂಡಾ ಇಡುತ್ತೇವೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು. ಅವರ ಫೋಟೋ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಈ ಪ್ರದೇಶದಲ್ಲಿ ಬಕ್ರೀದ್ ರಂಜಾನ್ ಕೂಡ ಮಾಡಲಿ, ಗಣೇಶೋತ್ಸವವನ್ನೂ ಮಾಡಲಿ ಎಂದರು.

ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ಹೋಗುವುದಾದರೆ ಹೋಗಲಿ. ನಮಗೆ ಯಾವ ಅಭ್ಯಂತರ, ಭಯವೂ ಇಲ್ಲ. ಅವರು ಸುಪ್ರೀಂ ಕೋರ್ಟ್ ಗೆ ಹೋದರೆ ನಾವು ಕೂಡಾ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ. ನಮ್ಮ ಒಕ್ಕೂಟ ಒಡೆಯಲು ಕೆಲ ಕುತಂತ್ರಿಗಳು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ನಾವು ಒಗ್ಗಟ್ಟಿನಲ್ಲಿದ್ದೇವೆ. ಇಂದು ಸಂಜೆಯಷ್ಟರಲ್ಲಿ ಸರ್ಕಾರ ಅನುಮತಿ ಕೊಡುವ ನಿರೀಕ್ಷೆ ಇದೆ ಎಂದರು.