ಮಂಡ್ಯ : ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್…

191
firstsuddi

ಮಂಡ್ಯ : ಲೋಕಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ, ಸುದ್ದಿಗಾರರೊಂದಿಗೆ ಮಾತನಾಡಿದ ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇದು ನನ್ನ ಗೆಲುವಲ್ಲ ಅಂಬರೀಶ್ ಅವರ ಗೆಲುವು. ನಾನು ತುಂಬಾ ದೊಡ್ಡ ಸಾಹಸವನ್ನು ಮಾಡಿದ್ದೇನೆ. ನನ್ನ ಬೆಂಬಲಕ್ಕೆ ನಿಂತವರನ್ನು ನಾನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ನನ್ನ ಗೆಲುವಿಗಾಗಿ ಮಂಡ್ಯದ ಜನತೆ ಅಲ್ಲದೇ ಇಡೀ ರಾಜ್ಯದ ಜನತೆ ಹಾರೈಸಿದ್ದಾರೆ. ಒಬ್ಬೊಬ್ಬರಿಗೂ ಧನ್ಯವಾದವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.