ಮಗಳು ಅನ್ಯಜಾತಿ ಯುವಕನನ್ನು ವಿವಾಹವಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು…

167
firstsuddi

ನೆಲಮಂಗಲ : ಮಗಳು ಅನ್ಯಜಾತಿ ಯುವಕನನ್ನು ವಿವಾಹ ಆಗಿದ್ದಕ್ಕೆ ಮನನೊಂದು ಪೋಷಕರು ಸಂಪ್‍ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹಾರೋಕೇತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗಪ್ಪ(51) ಹಾಗೂ ಚಂದ್ರಕಲಾ(45) ಆತ್ಮಹತ್ಯೆ ಮಾಡಿಕೊಂಡ ಪೋಷಕರು ಎಂದು ಗುರುತಿಸಲಾಗಿದೆ. ಮೃತರ ಮಗಳು ಸೌಮ್ಯಾ ಎಂಬುವವರು ನಿನ್ನೆ ತಾವು ಪ್ರೀತಿಸುತ್ತಿದ್ದ ಅನ್ಯಜಾತಿ ಯುವಕನೊಂದಿಗೆ ಮನೆ ಬಿಟ್ಟು ಹೋಗಿ ವಿವಾಹವಾಗಿದ್ದರು. ಇದರಿಂದ ಮನನೊಂದ ಪೋಷಕರು ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂದು ಡೆತ್ ನೋಟ್ ಬರೆದಿಟ್ಟು ಸಂಪ್‍ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.