ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ : ಡಾ.ಹಣಮಂತ ಮಳಲಿ.

84
firstsuddi

ಯಾದಗಿರಿ : ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ನೀವೇ(ಮುಸಲ್ಮಾನರೇ) ಮೊದಲು ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಈಗ ಹಿಂದೂಗಳು ಮಾಡ್ತಿದ್ದಾರೆ ಅಷ್ಟೇ ಎಂದು ಆರ್‍ಎಸ್‍ಎಸ್ ಮುಖಂಡ ಡಾ. ಹಣಮಂತ ಮಳಲಿ ಅವರು ಕಿಡಿಕಾರಿದರು.

ಜಿಲ್ಲೆಯ ಸೈದಾಪುರದಲ್ಲಿ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾ ನಟಿಯರಿಗೆ, ಶಾರೂಖ್ ಖಾನ್ ಮಗಳಿಗೆ ಹಿಜಾಬ್ ತೋಡಿಸೋಕೆ ಗಂಡಸ್ತನ ಇಲ್ವಾ..? ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಿ. ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಬ್ ನಿಂದಾಗಿ ಹಿಂದೂಗಳು ಎಚ್ಚರ ಆಗಿದ್ದಾರೆ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಎಂದು ಮುಸ್ಲಿಮರಿಗೆ ಸವಾಲು ಹಾಕಿದ್ದಾರೆ.

ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಎರಡು ಇದ್ದವರು ಮೂರು, ಮೂರು ಇದ್ದವರು ನಾಲ್ಕು, ನಾಲ್ಕು ಇದ್ದವರು ಮಕ್ಕಳನ್ನು ಮಾಡಿ. ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ಮುಂದೆ ನಡೆಯಲ್ಲ. ಮದುವೆ ವಯಸ್ಸಿಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ ಎಂದು ಮಳಲಿ ಹೇಳಿದ್ದಾರೆ.