ಮೂಡಿಗೆರೆ : ಕೃಷಿ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ನಿವೇಶನ ಮಂಜೂರು…

87
firstsuddi

ಕೊಟ್ಟಿಗೆಹಾರ : ಕೃಷಿ ಇಲಾಖೆಯ ಬಣಕಲ್‍ನ ಕೃಷಿ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಬಣಕಲ್ ಗ್ರಾ.ಪಂ ವತಿಯಿಂದ ನಿವೇಶನ ಮಂಜೂರು ಮಾಡಲಾಗಿದೆ ಎಂದು ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಹೇಳಿದರು.

ಕೃಷಿ ಸಂಪರ್ಕ ಕೇಂದ್ರಕ್ಕಾಗಿ ಮಂಜೂರಾದ ನಿವೇಶನಕ್ಕೆ ಇಂದು ಕೃಷಿ ಅಧಿಕಾರಿಗಳೊಡನೇ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಬಣಕಲ್‍ನ ಸರ್ವೆ ನಂ 353 ರಲ್ಲಿ ಮತ್ತಿಕಟ್ಟೆ ಮುಖ್ಯ ರಸ್ತೆಯಲ್ಲಿರುವ ಕೆಇಬಿ ಪಕ್ಕದಲ್ಲಿರುವ ನಿವೇಶನವನ್ನು ಕೃಷಿ ಇಲಾಖೆಯ ಕೃಷಿ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ ಎಂದರು.

ಮೂಡಿಗೆರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕರಾದ ಸುಮ ಮಾತನಾಡಿ, ಕೃಷಿಇಲಾಖೆಯ ಬಣಕಲ್‍ನ ರೈತ ಸಂಪರ್ಕ ಕೇಂದ್ರವು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಬಣಕಲ್ ಗ್ರಾ.ಪಂ ವತಿಯಿಂದ ನಿವೇಶನ ಮಂಜೂರಾಗಿರುವ ಬಗ್ಗೆ ಪರಿಶೀಲಿಸಲು ಇಂದು ಸ್ಥಳಕ್ಕೆ ಬೇಟಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್, ಮೂಡಿಗೆರೆ ಕೃಷಿ ಅಧಿಕಾರಿ ಗೀತಾ, ಬಣಕಲ್ ಕೃಷಿ ಅಧಿಕಾರಿ ವೆಂಕಟೇಶ್, ಪ್ರದೀಪ್ ಮುಂತಾದವರು ಇದ್ದರು.