ಕೊಟ್ಟಿಗೆಹಾರ: ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ ರಾಜ್ಯವನ್ನು ನಂಬರ್ ಒನ್ ಮಾಡುವುದಾಗಿ ಹೇಳಿ ಅದಕ್ಕೆ ಮತದಾರರು ಕಾಂಗ್ರೆಸನ್ನು ನಂಬರ್ ಒನ್ ಸ್ಥಾನಕ್ಕೆ ಇಳಿಸುವ ಮೂಲಕ ಸಮಿಶ್ರ ಸರ್ಕಾರದ ಆಡಳಿತಕ್ಕೆ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಮಾಜಿ ಹೋಬಳಿ ಅಧ್ಯಕ್ಷ ಶಶಿದರ್ ಜಾವಳಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 300 ರ ಗಡಿ ದಾಟಿದ್ದು ಹಾಗೂ ಎನ್‍ಡಿಎ ಮಿತ್ರಪಕ್ಷಗಳು 350 ಸ್ಥಾನಗಳನ್ನು ಪಡೆದ ಹಿನ್ನಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಬೇರಿ ಭಾರಿಸಿದ ಶೋಭಾ ಕರಂದ್ಲಾಜೆ ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ್ಮಿಶ್ರ ಸರ್ಕಾರವೂ ಜನತೆಗೆ ಸುಳ್ಳು ಭರವಸೆ ಕೊಡುತ್ತಾ ಈ ಬಾರಿ ಚುನಾವಣೆಯಲ್ಲಿ ನಂಬರ್ 1 ಸ್ಥಾನಕ್ಕೆ ಏರುವುದಾಗಿ ಹೇಳುತ್ತಿದ್ದು ಇದಕ್ಕೆ ಜನತೆ ತಕ್ಕ ಪಾಠ ಕಲಿಸಿ ನಂಬರ್ 1 ಸ್ಥಾನಕ್ಕೆ ಇಳಿಸಿದ್ದಾರೆ. ಪ್ರಧಾನಿಯವರ ಉತ್ತಮ ಆಡಳಿತ, ರಕ್ಷಣಾ ವ್ಯವಸ್ಥೆ ದೇಶವನ್ನು ನಂಬರ್ 1 ಸ್ಥಾನಕ್ಕೆ ಏರಿಸಿದೆ. ಮೋದಿಯನ್ನು ಟೀಕಿಸುವ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಹೋಗಿ ಯುಪಿಎ ಮೈತ್ರಿಕೂಟ ಹೀನಾಯ ಸೋಲನ್ನು ಕಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪರೀಕ್ಷಿತ್ ಜಾವಳಿ, ಜಾವಳಿ ಗ್ರಾ.ಪಂ ಅಧ್ಯಕ್ಷ ರುಕ್ಮಯ, ಸದಸ್ಯರಾದ ಮಂಜುನಾಥ್, ಪ್ರತೀಶ್, ಕಾರ್ಯಕರ್ತರಾದ ಚಂದ್ರಶೇಖರ್, ಸಂಪತ್, ಸುಮನ್, ರಜಿತ್, ರಂಜಿತ್, ಹರೀಶ್, ರಮೇಶ್, ಶಶಿಕುಮಾರ್ ಮುಂತಾದವರು ಇದ್ದರು.










